ಮನೋರಂಜನೆ

ಕಿರುಕುಳ ನೀಡುತ್ತಿರುವುದಾಗಿ ಉದ್ಯಮಿ ವಿರುದ್ಧ ದೂರು ಸಲ್ಲಿಸಿದ ಬಾಲಿವುಡ್ ಹಿರಿಯ ನಟಿ ಜೀನತ್ ಅಮನ್

Pinterest LinkedIn Tumblr

ಮುಂಬೈ: ಬಾಲಿವುಡ್ ಹಿರಿಯ ನಟಿ ಜೀನತ್ ಅಮನ್ ಉದ್ಯಮಿಯೊಬ್ಬರ ವಿರುದ್ಧ ಕಿರುಕುಳ ಮತ್ತು ನಿರಂತರ ಕರೆ ಮಾಡಿ ಹಿಂಸೆ ನೀಡುತ್ತಿದ್ದ ದಾಖಲಿಸಿದ್ದಾರೆ.

ತಮ್ಮನ್ನು ಹಿಂಬಾಲಿಸಿ ನಿರಂತರ ಕಿರುಕುಳ ನೀಡುತ್ತಿದ್ದಾರೆ ಮತ್ತು ಅವಮಾನ ಕಿರುಕುಳ ನೀಡುತ್ತಿದ್ದಾರೆ ಎಂದು ಜೀನತ್ ಅಮನ್ ಭಾರತೀಯ ದಂಡ ಸಂಹಿತೆ 304 ಡಿ ಮತ್ತು 509ರಡಿಯಲ್ಲಿ ಕೇಸು ದಾಖಲಿಸಿದ್ದಾರೆ.

ಹಿರಿಯ ನಟಿ ಜೀನತ್ ಅಮನ್ ಮತ್ತು ವ್ಯಾಪಾರಿ ಮಧ್ಯೆ ಕಳೆದ ಕೆಲ ಸಮಯಗಳಿಂದ ಸಂಪರ್ಕವಿತ್ತು. ಆದರೆ ಕೆಲ ವಿಚಾರಗಳ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಂಬಂಧ ಹಳಸಿಹೋಗಿತ್ತು. ಜೀನತ್ ಉದ್ಯಮಿ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದರು.

ಆದರೆ ಉದ್ಯಮಿಯು ನಿರಂತರವಾಗಿ ಜೀನತ್ ಅವರಿಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.

ನಿರಂತರ ಫೋನ್ ಕರೆ ಮಾಡಿ ಕಿರುಕುಳ ನೀಡದಂತೆ ಜೀನತ್ ಅರ್ಥ ಮಾಡಿಸಲು ಪ್ರಯತ್ನಿಸಿದರೂ ಪ್ರಯೋಜನವಾಗದ ಕಾರಣ ಮುಂಬೈಯ ಜುಹು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪ್ರಕರಣ ಕುರಿತು ತನಿಖೆ ಆರಂಭಿಸಲಾಗಿದೆ.

Comments are closed.