ಮನೋರಂಜನೆ

ಬಿಗ್ ಬಾಸ್ ಚಂದನ್ ಶೆಟ್ಟಿಗೆ ಖುಲಾಯಿಸಿದ ಅದೃಷ್ಟ ! ಕಾಯುತ್ತಿದೆ 10 ಕೋಟಿಯ ಆಫರ್!

Pinterest LinkedIn Tumblr

ಬೆಂಗಳೂರು: ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿಗಾಗಿ ಕಾಯುತ್ತಿದೆ 10 ಕೋಟಿಯ ಆಫರ್!

ಬಿಗ್ ಬಾಸ್ ವಿನ್ ಆದ ಮೇಲೆ ಚಂದನ್ ಶೆಟ್ಟಿ ದೊಡ್ಡ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. 5 ಸಿನೆಮಾ ಮತ್ತು 5 ಈವೆಂಟ್’ಗಾಗಿ ಬರೋಬರಿ 10 ಕೋಟಿಯ ಆಫರ್ ಚಂದನ್ ಮುಂದಿದೆಯಂತೆ.

ಬಿಗ್ ಬಾಸ್ ಮನೆಯಿಂದ ಬಂದ ಚಂದನ್’ಗೆ ಅವಕಾಶಗಳ ಮಹಾ ಮೇಳ ಕಾಯುತ್ತಿದೆ.

ಚಂದನ್ ಶೆಟ್ಟಿ ಅದೃಷ್ಟ ಖುಲಾಯಿಸಿ ಬಿಟ್ಟಿದೆ. ಬಹಳಷ್ಟು ಕಷ್ಟಪಟ್ಟು ಮೇಲೆ ಬರಲು ಯತ್ನಿಸುತ್ತಿದ್ದ ರಾಪ್ಪೆರ್ ಚಂದನ್ ಶೆಟ್ಟಿ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿರುವಂತೆಯೇ 5 ಕೋಟಿಯ ಈವೆಂಟ್ ಕಾಯುತ್ತಿದೆ. ಜೊತೆಗೆ 5 ಕೋಟಿಯ ಸಿನೆಮಾ ಅವಕಾಶ ಕೂಡ.ಕಾಯುತ್ತಿದೆ. ಒಟ್ಟಿನಲ್ಲಿ ಅದೃಷ್ಟ ಅಟ್ಟಿಸಿಕೊಂಡು ಬಂದಿದೆ.

ಇದಲ್ಲದೇ, ಎಸ್.ನಾರಾಯಣ್ ಅವರು ಚಂದನ್ ಕಾಲ್’ಶೀಟ್ ಕೇಳಿದ್ದಾರೆ. ಒಂದಷ್ಟು ಇತರ ಆಫರ್’ಗಳಿವೆ. ಬಂದಿರುವ ಆಫರ್ ಪ್ರಕಾರ ಸಿಗುವ ಸಂಭಾವನೆಯ ಮೊತ್ತವೆ 5 ಕೋಟಿ ತಲುಪಬಹುದಂತೆ!

Comments are closed.