ಬೆಂಗಳೂರು: ಬಿಗ್ ಬಾಸ್ ನಿಂದ ಖ್ಯಾತರಾಗಿರುವ ‘ಡಾಲ್’ ನಿವೇದಿತಾ ಗೌಡಗೆ ದಿನದಿಂದ ದಿನಕ್ಕೆ ಅಭಿಮಾನಿಗಳ ಸಂಘಯೇ ಹೆಚ್ಚುತ್ತಿದೆಯಂತೆ !
ಕಂಗ್ಲಿಷ್ ತರ ಕನ್ನಡ ಮಾತನಾಡುವ ನಿವೇದಿತಾಗೆ ಈಗ ಅಭಿಮಾನಿಗಳ ಜೊತೆ ಲವ್ ಪ್ರಪೋಸಲ್ ಕೂಡ ಬರುತ್ತಿದೆಯಂತೆ.
ಬಿಗ್ ಬಾಸ್ ಮನೆಯಿಂದ ಬಂದ ನಂತರ ಮೈಸೂರಿನ ತಮ್ಮ ಮನೆ ಸೇರಿಕೊಂಡಿರುವ ನಿವೇದಿತಾ ಗೌಡ ಹಾಗೂ ಚಂದನ್ ಅವರ ಸ್ನೇಹದ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ.
ಫೇಮಸ್ ಆದ ನಂತರ ನಿವೇದಿತಾ ಅವರಿಗೆ ಲವ್ ಪ್ರಪೋಸಲ್ ಗಳು ಬರುವುದಕ್ಕೆ ಹೆಚ್ಚಾಗಿದೆಯಂತೆ. ತಮ್ಮ ಬಳಿ ಪ್ರೇಮ ನಿವೇದನೆ ಮಾಡಿದವರಿಗೆ ನಿರಾಸೆ ಮಾಡದೆ ಧನ್ಯವಾದ ತಿಳಿಸುತ್ತಾರಂತೆ ನಿವೇದಿತಾ ಗೌಡ.
ನಿವೇದಿತಾ ಗೌಡ ಯಾರನ್ನ ಮದುವೆ ಆಗುತ್ತಾರೆ ಎನ್ನುವ ವಿಚಾರದ ಬಗ್ಗೆ ಈಗಾಗಲೇ ಚರ್ಚೆಗಳು ಶುರು ಆಗಿದೆ. ಸಂದರ್ಶನ ಒಂದರಲ್ಲಿ ಚಂದನ್ ಶೆಟ್ಟಿ ಅವರಿಂದ ಲವ್ ಪ್ರಪೋಸಲ್ ಬಂದರೆ ಏನು ಮಾಡುತ್ತೀರ ? ಎನ್ನುವ ಪ್ರಶ್ನೆಗೆ ನಿವೇದಿತಾ ಉತ್ತರಿಸಿದ್ದಾರೆ. ನಾನು ಅಪ್ಪ-ಅಮ್ಮ ನೋಡಿದ ಹುಡುಗನನ್ನೆ ಮದುವೆ ಆಗುವುದು. ನನಗಿನ್ನೂ ಚಿಕ್ಕ ವಯಸ್ಸು ಸದ್ಯ ಓದಿನ ಬಗ್ಗೆ ಗಮನ ಎಂದು ಉತ್ತರಿಸಿದ್ದಾರೆ.
Comments are closed.