ಮನೋರಂಜನೆ

ಬಿಗ್ ಬಾಸ್ ಬಳಿಕ ಇದೀಗ ಬಾಲಿವುಡ್ ಗೆ ಹಾರಲಿರುವ ಸೂಪರ್ ಸ್ಟಾರ್ ಜೆಕೆ

Pinterest LinkedIn Tumblr

ಬಿಗ್ ಬಾಸ್ ಸೀಸನ್ 5 ಮುಗಿಸಿಕೊಂಡು ಬಂದಿರುವ ಜಯರಾಮ್ ಕಾರ್ತಿಕ್ ಅವರಿಗೆ ಸಿನಿಮಾಗಳಲ್ಲಿ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಕನ್ನಡದಲ್ಲಿ ದಯಾಳ್ ಪದ್ಮನಾಭನ್ ಅವರ ಎರಡು ಚಿತ್ರಗಳಾದ ಆ ಕರಾಳ ರಾತ್ರಿ ಮತ್ತು ಪುಟ 109 ಚಿತ್ರಗಳಲ್ಲಿ ಅಭಿನಯಿಸಲು ಈಗಾಗಲೇ ಸಹಿ ಹಾಕಿದ್ದಾರೆ.

ಅದಕ್ಕಿಂತಲೂ ಹೆಚ್ಚು ಕುತೂಹಲಕರ ಸುದ್ದಿ ಅವರು ಬಾಲಿವುಡ್ ಚಿತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವುದು. ಹಿಂದಿಯಲ್ಲಿ ಸಿಯಾ ಕಾ ರಾಮ್ ಧಾರವಾಹಿಯಲ್ಲಿ ಈಗಾಗಲೇ ರಾವಣನ ಪಾತ್ರವನ್ನು ಮಾಡಿರುವ ಜೆಕೆ, ಇನ್ನು ಬಾಲಿವುಡ್ ಸಿನಿಮಾಗಳಲ್ಲಿ ಕೂಡ ಅಭಿನಯಿಸಲಿದ್ದಾರೆ.

ಈ ಬಗ್ಗೆ ಸ್ವತಃ ಜೆಕೆಯವರೇ ಸಿಟಿ ಎಕ್ಸ್ ಪ್ರೆಸ್ ಗೆ ಖುಷಿಯನ್ನು ಹಂಚಿಕೊಂಡಿದ್ದಾರೆ.ಬಿಗ್ ಬಾಸ್ ಮನೆಗೆ ಹೋಗುವ ಮೊದಲೇ ಈ ಬಗ್ಗೆ ಮಾತುಕತೆಯಾಗಿತ್ತು. ಕಳೆದ ಅಕ್ಟೋಬರ್ ನಲ್ಲಿ ಚಿತ್ರತಂಡ ಭೇಟಿ ಮಾಡಿ ಮಾತುಕತೆಯಾಗಿತ್ತಷ್ಟೆ. ಈ ತಿಂಗಳಲ್ಲಿ ಕೆಲಸ ಆರಂಭವಾಗುವುದರಲ್ಲಿ. ನಂತರ ನಾನು ಬಿಗ್ ಬಾಸ್ ಮನೆಯೊಳಗೆ ಹೋದೆ. ಅವರಿಗೆ ಈ ಬಗ್ಗೆ ತಿಳಿಸಿರಲಿಲ್ಲ. ನನ್ನ ಅದೃಷ್ಟಕ್ಕೆ ಚಿತ್ರ ನಿರ್ಮಾಪಕರು ಬೇರೆ ನಟರನ್ನು ಪರಿಗಣಿಸಲಿಲ್ಲ. ನನಗಾಗಿ ಕಾಯುತ್ತಿದ್ದರು. ಇದೀಗ ಮಾರ್ಚ್ ಕೊನೆಯ ವೇಳೆಗೆ ಚಿತ್ರ ನಿರ್ಮಾಣ ಆರಂಭವಾಗಲಿದೆ ಎಂದರು ಲಕ್ನೋ ಬೇಸ್ಡ್ ಬಾಲಿವುಡ್ ಚಿತ್ರದಲ್ಲಿ ಅಭಿನಯಿಸಲಿರುವ ಜೆಕೆ.

9 ವರ್ಷಗಳ ನಂತರ ರಮೇಶ್ ತಲ್ವರ್ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿದ್ದಾರೆ. 2009ರಲ್ಲಿ ಅವರು ಚಿತ್ರ ನಿರ್ದೇಶಿಸಿದ್ದರು.ಚಿತ್ರದ ಇತರ ಕಲಾವಿದರ ಆಯ್ಕೆ ನಡೆಯಬೇಕಷ್ಟೆ. ಜೆಕೆಗೆ ನಾಯಕಿಯಾಗಿ ಗೌಹಾರ್ ಖಾನ್ ಅವರನ್ನು ಸಂಪರ್ಕಿಸಿದೆಯಂತೆ ಚಿತ್ರತಂಡ.

ಕೃಷ್ಣ ಅಭಿಷೇಕ್ ಅವರ ಜೊತೆ ಮತ್ತೊಂದು ಹಿಂದಿ ಸಿನಿಮಾದಲ್ಲಿ ಅಭಿನಯಿಸಲು ಜೆಕೆ ಮುಂದಾಗಿದ್ದು, ಅದನ್ನು ದಿನಕರ್ ಕಪೂರ್ ನಿರ್ದೇಶಿಸಲಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರ ಸದ್ಯ ಹೇಳಲು ಸಾಧ್ಯವಿಲ್ಲ. ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಲು ಎಲ್ಲರಿಗೂ ಅವಕಾಶಗಳು ಸಿಗುವುದಿಲ್ಲ. ನನಗೆ ಇದೊಂದು ಉತ್ತಮ ದೊಡ್ಡ ಅವಕಾಶ ಎಂದು ಭಾವಿಸುತ್ತೇನೆ ಎನ್ನುತ್ತಾರೆ ಜಯರಾಮ್ ಕಾರ್ತಿಕ್.

Comments are closed.