ಮನೋರಂಜನೆ

ಬೆಂಗಳೂರು: ಫೆ.11ರಂದು ಮೊದಲ ಲೆಸ್ ಟ್ರಾಫಿಕ್ ಡೇ; ನಟ ಯಶ್ ರಾಯಭಾರಿ

Pinterest LinkedIn Tumblr

ಬೆಂಗಳೂರು: ಫೆ.11 (ಬಾನುವಾರ) ಬೆಂಗಳೂರಿನಲ್ಲಿ ಮೊದಲ ಆವೃತ್ತಿಯ ಲೆಸ್ ಟ್ರಾಫಿಕ್ ಡೇ ನಡೆಯಲಿದೆ. ಪರಿಸರ ಮಾಲಿನ್ಯ ಪ್ರಮಾಣ ತಗ್ಗಿಸಲು ಖಾಸಗಿ ವಾಹನಗಳನ್ನು ಅತ್ಯಂತ ಕಡಿಮೆ ಬಳಕೆ ಮಾಡುವುದು, ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸಿಕೊಳ್ಳಬೇಕೆಂದು ಉದ್ದೇಶದೊಡನೆ ರಾಜ್ಯ ಸಾರಿಗೆ ಇಲಾಖೆ ಮತ್ತು ಇತರೆ ಸೇವಾ ಸಂಘಟನೆಗಳು ಸೇರಿ ಈ ಕಾರ್ಯಕ್ರಮ ಆಯೋಜಿಸಿದೆ.

ಕನ್ನಡ ಚಿತ್ರನಟ ಯಶ್ ಈ ಕಾರ್ಯಕ್ರಮದ ಪ್ರಚಾರ ರಾಯಭಾರಿಯಾಗಿದ್ದಾರೆ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಹೇಳಿದರು. “ನಗರದ ಹಲವಾರು ಭಾಗಗಳಲ್ಲಿ ಕೆಸ್ ಟ್ರಾಫಿಕ್ ಡೇ ಭಾಗವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಬೆಂಗಳೂರಿನ ನಿವಾಸಿಗಳು ಖಾಸಗಿ ವಾಹನಗಳನ್ನು ಆಶ್ರಯಿಸದೆ ಸಾರ್ವಜನಿಕ ಸಾರಿಗೆಯನ್ನು ಬಳಸಲು ಕೋರಲಾಗಿದೆ.” ಸಾರಿಗೆ ಇಲಾಖೆಯು ಡಿಸೆಂಬರ್ 2017ರಲ್ಲಿ ಉಪಕ್ರಮವನ್ನು ಘೋಷಿಸಿದ್ದು ಪ್ರತಿ ತಿಂಗಳ ಎರಡನೇ ಭಾನುವಾರ ಲೆಸ್ ಟ್ರಾಫಿಕ್ ಡೇ ಆಚರಿಸಲಾಗುತ್ತದೆ.

ಪ್ರಧಾನಿ ಇಂತಹಾ ಹೇಳಿಕೆ ನೀಡಬಾರದಿತ್ತು
“ಆಯೋಗದ ಕುರಿತ ಶೇಕಡಾವಾರು ಹೇಳಿಕೆ ಪ್ರಧಾನಿಗಳ ಘನತೆಗೆ ಶೋಭೆ ತರುವುದಿಲ್ಲ. ‘ನಂಗಾನಾಚ್’ ನಂತಹಾ ಪದಗಳನ್ನು ಬಳಸಿ ಪ್ರಧಾನಿ ಹುದ್ದೆಯಲ್ಲಿದ್ದವರು ಅಗ್ಗದ ಟೀಕೆಗಳನ್ನು ಮಾಡಬಾರದು. ಮೋದಿ ಹೇಳಿಕೆ ತಪ್ಪು” ಕಳೆದ ಭಾನುವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಪ್ರಧಾನಿ ಮೋದಿ ಕಾರ್ಯಕ್ರಮದ ವಿಚಾರವಾಗಿ ರೇವಣ್ಣ ಈ ಮಾತುಗಳನ್ನು ಹೇಳಿದ್ದರು

Comments are closed.