ಬೆಂಗಳೂರು: ಇತ್ತೀಚೆಗಷ್ಟೇ ನಿಶ್ಚಿತಾರ್ಥ ನಡೆದಿದ್ದ ಮೇಘನಾ ರಾಜ್-ಚಿರಂಜೀವಿ ಸರ್ಜಾ ಜೋಡಿಯ ವಿವಾಹ ಏ.29 ರಂದು ಕ್ರೈಸ್ತ ಸಂಪ್ರದಯಾದ ಪ್ರಕಾರ ನಡೆದಿದೆ.
ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಸೇಂಟ್ ಆಂಥೋನೀಸ್ ಚರ್ಚ್ ನಲ್ಲಿ ವಿವಾಹ ನೆರವೇರಿದೆ. ಚರ್ಚ್ ಫಾದರ್ ಸಮ್ಮುಖದಲ್ಲಿ ಮೇಘನಾರಾಜ್ ಹಾಗೂ ಚಿರಂಜೀವಿ ಸರ್ಜಾ ಬೈಬಲ್ ಮುಟ್ಟಿ ವಧು ವರರು ಮದ್ವೆಗೆ ಸಂಪೂರ್ಣ ಒಪ್ಪಿಗೆ ನೀಡಿದರು. ನಂತರ ಬಳಿಕ ಮೇಘನಾ ಚಿರು ಪರಸ್ಪರ ರಿಂಗ್ ತೊಡಿಸಿದ್ದಾರೆ.
ಎರಡೂ ಕುಟುಂಬಗಳಿಗೆ ಸಿನಿಮಾ ನಂಟಿರುವುದರಿಂದ ಅನೇಕ ತಾರೆಯರು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಹತ್ತಿರದ ಸಂಬಂಧಿಕರನ್ನ ಮಾತ್ರ ಆಹ್ವಾನಿಸಲಾಗಿತ್ತು. ಮೇ 2 ರಂದು ಅರಮನೆ ಮೈದಾನದಲ್ಲಿ ಮತ್ತೊಮ್ಮೆ ಹಿಂದೂ ಸಂಪ್ರದಾಯದ ಪ್ರಕಾರ ಇಬ್ಬರ ವಿವಾಹ ನಡೆಯಲಿದೆ.
Comments are closed.