ಮನೋರಂಜನೆ

‘ರೆಸಾರ್ಟ್‌ ಮ್ಯಾನೇಜರ್‌ಗಳಿಂದ ರಾಜ್ಯಪಾಲರ ಭೇಟಿ; ಸರ್ಕಾರ ರಚನೆಗೆ ಹಕ್ಕು ಮಂಡನೆ’: ಪ್ರಕಾಶ್‌ ರೈ ವ್ಯಂಗ್ಯ

Pinterest LinkedIn Tumblr

ಬೆಂಗಳೂರು: ಕುದುರೆ ವ್ಯಾಪಾರ ತಪ್ಪಿಸಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ತಮ್ಮ ಶಾಸಕರನ್ನು ರೆಸಾರ್ಟ್‌ನಲ್ಲಿ ಒಟ್ಟು ಗೂಡಿಸಿವೆ. ‘ರೆಸಾರ್ಟ್‌ ರಾಜಕಾರಣ’ ಮತ್ತೆ ಸುದ್ದಿಯಾಗುತ್ತಿರುವ ಬೆನ್ನಲೇ ಪ್ರಕಾಶ್‌ ರೈ ಟ್ವಿಟರ್‌ನಲ್ಲಿ ವ್ಯಂಗ್ಯವಾಡಿದ್ದಾರೆ.

‘ಹಾಲಿಡೇ ರೆಸಾರ್ಟ್‌ ಮ್ಯಾನೇಜರ್‌ಗಳು ಮಾನ್ಯ ರಾಜ್ಯಪಾಲರನ್ನು ಭೇಟಿಯಾಗುತ್ತಿದ್ದು, ಸರ್ಕಾರ ರಚನೆ ಹಕ್ಕು ಮಂಡಿಸಲಿದ್ದಾರೆ. ಏಕೆಂದರೆ, ಅವರ ಬಳಿಕ 116 ಶಾಸಕರ ಬಲವಿದೆ..– ಇದು ಕರ್ನಾಟಕ ಬ್ರೇಕಿಂಗ್‌ ನ್ಯೂಸ್‌’ ಎಂದು ರೆಸಾರ್ಟ್‌ ರಾಜಕಾರಣವನ್ನು ಟೀಕಿಸಿದ್ದಾರೆ.

‘ಯಾವೊಂದು ಪಕ್ಷವೂ ಪೂರ್ಣ ಬಹುಮತ ಪಡೆದಿಲ್ಲ. ಕಾಂಗ್ರೆಸ್‌–ಬಿಜೆಪಿ–ಜೆಡಿಎಸ್‌ ಪಕ್ಷಗಳು ಒಬ್ಬರನ್ನು ಒಬ್ಬರು ಮಾರುವ, ಕೊಳ್ಳುವ ವ್ಯಾಪಾರದಲ್ಲಿ ಅಧಿಕಾರ ಪಡೆದುಕೊಳ್ಳುತ್ತಾರೆ. ನಮ್ಮ ಅನುಮತಿಯಿಲ್ಲದೆ…ಈ ಪಕ್ಷಗಳ ಮುಂದೆ ಕೊನೆಗೂ ಸೋತ್ತದ್ದು ನಾವು, ಏನು ಮಾಡೋಣ?’ ಎಂದು ‍ಪ್ರಶ್ನೆ ಮುಂದಿಟ್ಟಿದ್ದಾರೆ.

ಜಸ್ಟ್‌ ಆಸ್ಕಿಂಗ್‌ ಹ್ಯಾಷ್‌ಟ್ಯಾಗ್‌ ಜತೆಗೆ ‘ಏನು ಮಾಡೋಣ’ ಅಭಿಯಾನವನ್ನು ಪ್ರಕಾಶ್‌ ರೈ ಪ್ರಾರಂಭಿಸಿದ್ದಾರೆ.

Comments are closed.