ಮನೋರಂಜನೆ

ರಾಮ್ ಗೋಪಾಲ್ ವರ್ಮಾ ರಿಂದ ಕರ್ನಾಟಕ ಐಪಿಎಸ್ ’ಆಫೀಸರ್’ ಕಥೆಯುಳ್ಳ ಸಿನೆಮಾ

Pinterest LinkedIn Tumblr

ವಿವಾದಾತ್ಮಕ ನಿರ್ದೇಶಕ ಎಂದೇ ಹೆಸರಾಗಿರುವ ಟಾಲಿವುಡ್ ಮತ್ತು ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ನಾಗಾರ್ಜುನ ಹೀರೋ ಆಗಿ ’ಆಫೀಸರ್’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆದರೆ ಈ ಚಿತ್ರದ ಕಥೆ ಏನು ಎಂಬುದನ್ನು ಅವರು ಇದುವರೆಗೂ ಬಹಿರಂಗಪಡಿಸಿರಲಿಲ್ಲ.

ಈ ಬಗ್ಗೆ ಈಗವರು ಟ್ವೀಟ್ ಮಾಡಿದ್ದು, ಆಫೀಸರ್ ಸಿನಿಮಾ ಕರ್ನಾಟಕ ಐಪಿಎಸ್ ಅಧಿಕಾರಿ ಕೆ ಎಂ ಪ್ರಸನ್ನ ಅವರ ಜೀವನ ಕಥೆಯಾಧಾರಿತವಾದದ್ದು ಎಂದಿದ್ದಾರೆ. ಈ ಬಗ್ಗೆ ಸಾಲು ಸಾಲು ಟ್ವೀಟ್‌ಗಳನ್ನು ಮಾಡಿ ಅವರ ಫೋಟೋ ಸಮೇತ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕರ್ನಾಟಕ ಮೂಲದ ಕೆ ಎಂ ಪ್ರಸನ್ನ ಒಬ್ಬ ಐಪಿಎಸ್ ಅಧಿಕಾರಿ. ಅವರನ್ನು ಮುಂಬೈನ ಓರ್ವ ಪೊಲೀಸ್ ಉನ್ನತಾಧಿಕಾರಿ ಪ್ರಕರಣದ ವಿಚಾರಣೆಗೆ ರಚಿಸಿದ್ದ ವಿಶೇಷ ತನಿಖಾ ತಂಡದ (ಸಿಟ್) ಮುಖ್ಯಸ್ಥರನ್ನಾಗಿ ನೇಮಿಸಿದ್ದರು. 2010ರಲ್ಲಿ ಅವರು ನನ್ನೊಂದಿಗೆ ಕೆಲವು ಸಂಗತಿಗಳನ್ನು ಹಂಚಿಕೊಂಡರು. ಅದರ ಆಧಾರವಾಗಿ ತೆರೆಗೆ ತಂದಿರುವ ಸಿನಿಮಾ ’ಆಫೀಸರ್’ ಎಂದಿದ್ದಾರೆ.

ಮುಂಬೈ ಕ್ರೈಂ ಬ್ರಾಂಚ್ ಎಸಿಪಿ (ಪ್ರಸನ್ನ) ಪಾತ್ರವನ್ನು ನಾಗಾರ್ಜುನ ಪೋಷಿಸಿದ್ದಾರೆ. ಐಪಿಎಸ್ ಹಂಚಿಕೊಂಡ ಅಂಶಗಳನ್ನು ಕಥೆಯಾಗಿಸಿಕೊಂಡು ಆಫೀಸರ್ ಸಿನಿಮಾ ತೆಗೆದಿದ್ದೇನೆ ಎಂದು ಹಲವು ಟ್ವೀಟ್‌ಗಳನ್ನು ಮಾಡಿದ್ದಾರೆ. ಹಾಗಾಗಿ ಈ ಸಿನಿಮಾ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಿದೆ. ಈ ಸಿನಿಮಾವನ್ನು ಮೇ 25ರಂದು ಅಲ್ಲದೆ ಜೂನ್ 1ರಂದು ಬಿಡುಗಡೆ ಮಾಡಲು ನಿರ್ಧರಿಸಿದೆ ಚಿತ್ರತಂಡ.

Comments are closed.