ಬಳ್ಳಾರಿ: ನಟ ಪುನೀತ್ ರಾಜಕುಮಾರ್ ಅವರು ಕಾರು ಅಪಘಾತದಿಂದ ಪಾರಾಗಿರುವ ಘಟನೆ ಗುರುವಾರ ರಾತ್ರಿ ಬಳ್ಳಾರಿ ಸಮೀಪದಲ್ಲಿ ನಡೆದಿದೆ. ಅದೃಷ್ಟವಶಾತ್ ಪುನೀತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಟಸಾರ್ವಭೌಮ ಚಿತ್ರೀಕರಣ ಮುಗಿಸಿ ಬಳ್ಳಾರಿಯಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾಗ ಈ ಅವಘಡ ನಡೆದಿದೆ. ಕಾರಿನ ಟೈರ್ ಸ್ಫೋಟಗೊಂಡು ಗಾಡಿ ಸೈಡಿಗೆ ಎಳೆದಿದ್ದರಿಂದ ಅಪಘಾತ ಸಂಭವಿಸಿದೆ. ಪುನೀತ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಬಚಾವ್ ಆಗಿದ್ದಾರೆ.
ಕೆ.ಎ.೦೫ ಎಂ.ಡಬ್ಲ್ಯೂ ೧೪೪ ನಂಬರಿನ ರೇಂಜ್ ರೋವರ್ ಕಾರಿನಲ್ಲಿ ನಟ ಪುನೀತ್ ಬೆಂಗಳೂರಿಗೆ ತೆರಳುತ್ತಿದ್ದರು. ಪುನೀತ್ ಜತೆ ಗನ್ ಮ್ಯಾನ್ ಹಾಗೂ ಕಾರಿನ ಚಾಲಕರಿದ್ದರು.
Comments are closed.