ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರ ಗೀತೆಗಳನ್ನು ಕೇಳಿ ಆನಂದಿಸಬೇಕು ಎಂದು ಕಾದಿರುವ ಸಂಗೀತ ಪ್ರೇಮಿಗಳಿಗೆ ಇಲ್ಲಿದೆ ನೋಡಿ ಒಂದು ಸುವರ್ಣಾವಕಾಶ. ಸುದೀರ್ಘ ಗ್ಯಾಪ್ ಬಳಿಕ ಮಧುರ ಕಂಠದ ಗಾಯಕಿ ಆಶಾ ಭೋಸ್ಲೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಇದೇ ಶನಿವಾರ (ಜೂ.9) ಸಂಜೆ 7 ಗಂಟೆಗೆ ಲೈವ್ ಕಾನ್ಸರ್ಟ್ ನಡೆಸಿಕೊಡಲಿದ್ದಾರೆ ಆಶಾ ಭೋಸ್ಲೆ.
ಆಶಾ ಭೋಂಸ್ಲೆ ಜತೆಗೆ ಜಾವೇದ್ ಅಲಿ ಸಹ ಧ್ವನಿಗೂಡಿಸಲಿದ್ದಾರೆ. ಈ ಹಿಂದೆ ಇದೇ ಜೋಡಿ ಹೈದರಾಬಾದ್‌ನಲ್ಲೂ ಲೈವ್ ಕಾನ್ಸರ್ಟ್ ನಡೆಸಿಕೊಟ್ಟು ಸಂಗೀತ ಪ್ರೇಮಿಗಳ ಮನಸ್ಸು ಗೆದ್ದಿತ್ತು. ಹಿರಿ ಕಿರಿಯ ಗಾಯಕರ ಈ ಜುಗಲ್‌ಬಂಧಿ ಮತ್ತೊಮ್ಮೆ ಮೋಡಿ ಮಾಡಲಿದೆ. ಆದರೆ ಇದಕ್ಕೆ ನಿರ್ದಿಷ್ಟ ಶುಲ್ಕ ನಿಗದಿಪಡಿಸಲಾಗಿದ್ದು, ಎರಡು ವರ್ಷ ಮೇಲ್ಪಟ್ಟ ಮಕ್ಕಳಿಗೂ ಟಿಕೆಟ್ ಇರುತ್ತದೆ.
ವೈಟ್‍ಫೀಲ್ಡ್ ರಸ್ತೆಯಲ್ಲಿರುವ ಫೀನಿಕ್ಸ್ ಮಾರ್ಕೆಟ್ ಸಿಟಿ ಮಾಲ್‌ನಲ್ಲಿ ಈ ಸಂಗೀತ ಸುಧೆ ಹರಿಯಲಿದೆ. ಈ ಬಗ್ಗೆ ಸ್ವತಃ ಟ್ವೀಟ್ ಮಾಡಿರುವ ಆಶಾ ಭೋಸ್ಲೆ, ಬೆಂಗಳೂರಿಗೆ ನನ್ನನ್ನು ಬರಮಾಡಿಕೊಂಡ ಸಂಗೀತ ಪ್ರೇಮಿಗಳಿಗೆ ಧನ್ಯವಾದಗಳು. ನಾಳೆ ಸಂಜೆ ಲೈವ್ ಕಾನ್ಸರ್ಟ್‌ನಲ್ಲಿ ಸಿಗುತ್ತೇನೆ ಎಂದಿದ್ದಾರೆ.
ಸತ್ಯ ಸಾಯಿ ಬಾಬಾ ಜೀವಂತವಿದ್ದಾಗ ಆಶ್ರಮಕ್ಕೆ ಆಗಾಗ ಬರುತ್ತಿದ್ದೆ. ಆದರೆ ಈಗ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಬೆಂಗಳೂರಿನಲ್ಲಿ ಎಂದೂ ಉಳಿದುಕೊಂಡಿರಲಿಲ್ಲ. ಅವಕಾಶ ಸಿಕ್ಕಿದರೆ ಇಂತಹ ಕೂಲ್ ಸಿಟಿಯನ್ನು ಸುತ್ತಾಡಬೇಕು ಎಂದಿದ್ದೇನೆ ಎಂದಿದ್ದಾರೆ ಆಶಾ ಭೋಂಸ್ಲೆ. ಬೆಂಗಳೂರಿನಲ್ಲಿ ಎರಡು ದಶಕಗಳ ಬಳಿಕ ನೇರ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿರುವುದು.
Comments are closed.