ಮನೋರಂಜನೆ

ಮತ್ತೆ ಚಿತ್ರರಂಗಕ್ಕೆ ‘ರಮ್ಯಾ’ ರೀ ಎಂಟ್ರಿ ! ಈ ಬಗ್ಗೆ ನಟ ರಕ್ಷಿತ್ ಶೆಟ್ಟಿ ಹೇಳಿದ್ದೇನು…?

Pinterest LinkedIn Tumblr

ಬೆಂಗಳೂರು: ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ಸಂಸದೆ ಹಾಗೂ ನಟಿ ರಮ್ಯಾ ಅವರು 2019ರ ಲೋಕಸಭಾ ಚುನಾವಣೆ ಬಳಿಕ ಚಿತ್ರರಂಗಕ್ಕೆ ಮರಳುವ ಸೂಚನೆಯನ್ನು ನೀಡಿದ್ದಾರೆ.

ಸದ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿರುವ ರಮ್ಯಾ, ನಟ ರಕ್ಷಿತ್ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರ ನೀಡುವ ಸಂದರ್ಭದಲ್ಲಿ ಚಿತ್ರರಂಗಕ್ಕೆ ಮರಳುವ ಕುರಿತು ಮಾತನಾಡಿದ್ದಾರೆ.

ಜೂನ್ 7ರಂದು ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಟೀಸರ್ ವೀಕ್ಷಿಸಿದ ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿ ಟ್ವಿಟರ್‌ನಲ್ಲಿ ರಕ್ಷಿತ್‍ಗೆ ಟ್ಯಾಗ್ ಮಾಡಿದ್ದರು.

https://twitter.com/rakshitshetty/status/1005074851902603265

‘ನಾನು ನಿಮ್ಮ ಸಿನಿಮಾಗಳನ್ನು ಇಷ್ಟಪಡುತ್ತೇನೆ. ಕನ್ನಡ ಸಿನಿಮಾಗಳಿಗೆ ನೀವು ಸರಿಯಾದ ವ್ಯಕ್ತಿ. ಹೊಸ ಹೊಸ ಸಿನಿಮಾಗಳನ್ನು ಕನ್ನಡ ಜನತೆಗೆ ನೀಡುವ ನಿಮ್ಮ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ನಿಮ್ಮ ಸಿನಿಮಾಗೆ ಶುಭವಾಗಲಿ’ ಎಂದು ತಿಳಿಸಿದ್ದರು.

ರಮ್ಯಾ ಟ್ವೀಟ್‍ಗೆ ಪ್ರತಿಕ್ರಿಯಿಸಿದ ರಕ್ಷಿತ್ ಶೆಟ್ಟಿ, ನಮ್ಮ ಚಿತ್ರತಂಡಕ್ಕೆ ಶುಭ ಕೋರಿದ್ದಕ್ಕೆ ಧನ್ಯವಾದಗಳು. ನೀವು ಯಾವಾಗಲೂ ಸ್ಯಾಂಡಲ್‍ವುಡ್‍ನ ಕ್ವೀನ್. ಮತ್ತೆ ನಿಮ್ಮನ್ನು ಬೆಳ್ಳಿ ಪರದೆಯ ಮೇಲೆ ನೋಡಲು ಇಷ್ಟಪಡುತ್ತೇವೆ’ ಎಂದು ಉತ್ತರಿಸಿದ್ದರು.

ಈ ಪ್ರಶ್ನೆಗೆ ‘2019’ ಎಂದಷ್ಟೇ ಬರೆದು ರಮ್ಯಾ ಟ್ವೀಟ್ ಮಾಡಿದ್ದಾರೆ. ರಮ್ಯಾ ಪ್ರತಿಕ್ರಿಯಿಂದ ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

2016ರಲ್ಲಿ ತೆರೆಕಂಡ ‘ನಾಗರಹಾವು’ ಚಿತ್ರದಲ್ಲಿ ರಮ್ಯಾ ಕೊನೆ ಬಾರಿಗೆ ಅಭಿನಯಿಸಿದ್ದರು.

Comments are closed.