ಫಿಟ್ನೆಸ್ ಚಾಲೆಂಜ್ ಆರಂಭವಾಗಿದ್ದೇ ತಡ ಸಿನಿಮಾ ತಾರೆಗಳ ಫಿಟ್‌ನೆಸ್ ಸೀಕ್ರೆಟ್ ಒಬ್ಬೊಬ್ಬರದೇ ಹೊರಬೀಳುತ್ತಿದೆ. ನಾನು ಫಿಟ್ ಆದ್ರೆ ದೇಶ ಫಿಟ್ #HumFitTohIndiaFit ಎಂಬ ಹ್ಯಾಶ್‍ಟ್ಯಾಗ್ ಮೂಲಕ ಆರಂಭವಾದ ಈ ಅಭಿಯಾನ ಈಗ ವೈರಲ್ ಸ್ವರೂಪ ಪಡೆದಿದೆ.
ಪ್ರೀತಿ ಝಿಂಟಾ ಅವರಿಗೆ ಶಗುನ್ ಖನ್ನಾ ಫಿಟ್‍ನೆಸ್ ಚಾಲೆಂಜ್ ಒಡ್ಡಿದ್ದರು. ಇದನ್ನು ಸ್ವೀಕರಿಸಿ ಪ್ರೀತಿ ಜಿಮ್‌ನಲ್ಲಿ ಬೆವರಿಳಿಸಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಚಾಲೆಂಜ್ ಪೂರೈಸಿರುವ ಅವರು, ಫಿಟ್‍ನೆಸ್ ಚಾಲೆಂಜನ್ನು ಸಲ್ಮಾನ್ ಖಾನ್‍ಗೆ ರವಾನಿಸಿದ್ದಾರೆ.
ತಮ್ಮ ಟ್ವಿಟರ್‌ನಲ್ಲಿ ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಈ ಪ್ರಯತ್ನಕ್ಕೆ ಕೃತಜ್ಞತೆಗಳನ್ನು ತಿಳಿಸಿದ್ದಾರೆ ಪ್ರೀತಿ ಝಿಂಟಾ. ಸದಾ ಕ್ರೀಡಾಕಾರರ ಫಿಟ್‌ನೆಸ್ ಬಗ್ಗೆ ಕಾಳಜಿ ತೋರುವ ರಾಜವರ್ಧನ್ ಸಿಂಗ್ ಈ ಅಭಿಯಾನವನ್ನು ಆರಂಭಿಸಿದ್ದರು. ಅದು ಈಗ ಒಬ್ಬರಿಂದ ಮತ್ತೊಬ್ಬರಿಗೆ ಹಸ್ತಾಂತರವಾಗುತ್ತಿದ್ದು, ಸೆಲೆಬ್ರಿಟಿಗಳು ತಮ್ಮ ಫಿಟ್‍ನೆಸ್ ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಇನ್ನೊಂದು ಕಡೆ ತಮ್ಮ ಹೆಸರನ್ನೂ ಬದಲಾಯಿಸಿಕೊಂಡಿದ್ದಾರೆ ಪ್ರೀತಿ ಝಿಂಟಾ. ತಮ್ಮ ಹೆಸರಿನ ಜೊತೆಗೆ ’ಜಿ’ ಅಕ್ಷರ ಸೇರಿಸಿಕೊಂಡು ಪ್ರೀತಿ ‘ಜಿ’ ಜಿಂಟಾ ಎಂದು ಬದಲಾಯಿಸಿಕೊಂಡಿದ್ದಾರೆ. 2016ರಲ್ಲಿ ಯುಎಸ್ ಮೂಲದ ಜೀನ್ ಗುಡ್‌ಇನಫ್‌ರನ್ನು ವರಿಸಿದ್ದರು. ಹಾಗಾಗಿ ಅವರ ಹೆಸರಿನ ಮೊದಲಕ್ಷರವನ್ನು ಇದೀಗ ಸೇರಿಸಿಕೊಂಡಿದ್ದಾರೆ.
ಸ್ಯಾಂಡಲ್‍ವುಡ್ ತಾರೆಗಳಾದ ಸುದೀಪ್, ಯಶ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವಾರು ತಾರೆಗಳು ತಮ್ಮ ಫಿಟ್‍ನೆಸ್ ಚಾಲೆಂಜನ್ನು ಸ್ವೀಕರಿಸಿ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ.
Comments are closed.