ಮನೋರಂಜನೆ

ಬಿಗ್ ಬಾಸ್ ಖ್ಯಾತಿಯ ನಟಿಯ ನಗ್ನ ವಿಡಿಯೋ ಸಹೋದರಿಯಿಂದ ಪೋಸ್ಟ್!

Pinterest LinkedIn Tumblr

ಮುಂಬೈ: ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ಧಾರಾವಾಹಿ ನಟಿ ಸಾರಾ ಖಾನ್ ಬಾತ್‍ಟಬ್‍ನಲ್ಲಿ ನಗ್ನವಾಗಿರುವ ವಿಡಿಯೋವನ್ನು ಕುಡಿದ ಮತ್ತಿನಲ್ಲಿ ಆಕೆಯ ಸಹೋದರಿ ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಸುದ್ದಿ ವೈರಲ್ ಆಗಿದೆ.

ಸಾರಾ ಖಾನ್ ತನ್ನ ಸಹೋದರಿ ಜೊತೆ ಶ್ರೀಲಂಕಾ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ ಸಹೋದರಿಯರಿಬ್ಬರು ಕಾಲ ಕಳೆಯುತ್ತಾ ಬಾತ್‍ಟಬ್‍ನಲ್ಲಿ ಶವರ್ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಸಾರಾ ಸಹೋದರಿ ಆರ್ಯ ತನ್ನ ಸಹೋದರಿ ಸಂಪೂರ್ಣ ನಗ್ನವಾಗಿರುವ ವಿಡಿಯೋವನ್ನು ತನ್ನ ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಆಗುತ್ತಿದ್ದಂತೆ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆರ್ಯ ಆ ವಿಡಿಯೋವನ್ನು ತಕ್ಷಣ ಡಿಲೀಟ್ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಾರಾ, ಇದೆಲ್ಲ ಹೇಗಾಯಿತೋ ಎಂಬುದು ನನಗೆ ತಿಳಿದಿಲ್ಲ. ಎಲ್ಲವೂ ತಪ್ಪಾಗಿ ಹೋಯಿತು. ನನ್ನ ಸಹೋದರಿ ತಮಾಷೆಗಾಗಿ ಈ ವಿಡಿಯೋವನ್ನು ಮಾಡಿದಳು. ನಂತರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಕೆ ಈ ವಿಡಿಯೋವನ್ನು ಡಿಲೀಟ್ ಮಾಡಿದಳು. ವಿಡಿಯೋ ಅಪ್ಲೋಡ್ ಮಾಡುವ ಸಮಯದಲ್ಲಿ ನನ್ನ ಸಹೋದರಿ ಮದ್ಯ ಸೇವಿಸಿದ್ದಳು. ನಾವು ತಮಾಷೆ ಮಾಡುತ್ತಾ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದೇವು. ಆ ಸಮಯದಲ್ಲಿ ಈ ರೀತಿ ಆಯಿತು ಎಂದು ತಿಳಿಸಿದ್ದಾರೆ.

ಜಗತ್ತಿನಲ್ಲಿ ತಂತ್ರಜ್ಞಾನ ತುಂಬಾ ಮುಂದುವರೆದಿದೆ. ಈ ತಂತ್ರಜ್ಞಾನ ಕೆಲವು ಬಾರಿ ನಮಗೆ ಹಾನಿಕಾರಕವಾಗುತ್ತದೆ. ಎಲ್ಲರು ಎಚ್ಚರದಿಂದಿರಿ ಎಂದು ವಿಡಿಯೋ ವೈರಲ್ ಆದ ನಂತರ ನಟಿ ಸಾರಾ ಪ್ರತಿಕ್ರಿಯಿಸಿದ್ದಾರೆ.

ತನ್ನ ಸಹೋದರಿಯ ವಿಡಿಯೋ ಡಿಲೀಟ್ ಮಾಡುತ್ತಿದ್ದಂತೆ ಆರ್ಯ ತಾನು ಬಾತ್‍ಟಬ್‍ನಲ್ಲಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಆರ್ಯ ಅವರ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Comments are closed.