ಬೆಂಗಳೂರು: ‘ಪ್ರಪಂಚದಲ್ಲಿ ಎಲ್ಲಾ ರೋಗಕ್ಕೂ ಮದ್ದಿದೆ ಆದರೆ ಹೊಟ್ಟೆಕಿಚ್ಚಿಗೆ ಮದ್ದಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಡಾ.ಜಯಮಾಲಾ ಅವರು ಶಾಸಕಿ ಲಕ್ಷ್ಮೀ ಹೆಬ್ಬಾಳ್‌ಕರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಯಮಾಲಾ ಲಕ್ಷ್ಮೀ ಹೆಬ್ಬಾಳ್‌ಕರ್ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತ ಪಡಿಸಿದರು. ನಾನು ಎಲ್ಲಾ ರೀತಿಯ ಸಾಧನೆಗಳನ್ನು ಮಾಡಿಯೇ ಈ ಹಂತಕ್ಕೆ ಬಂದಿದ್ದೇನೆ.ಅವರ ಆ ರೀತಿಯ ಹೇಳಿಕೆ ನನಗೆ ಸರಿ ಎನಿಸಲಿಲ್ಲ ಎಂದರು.
ಜಯಮಾಲಾ ಅವರಿಗೆ ಅಚ್ಚರಿಯೆಂಬಂತೆ ಸಚಿವ ಸ್ಥಾನ ದೊರಕಿದ ಬಳಿಕ ಸ್ಥಾನ ವಂಚಿತೆಯಾಗಿದ್ದ ಲಕ್ಷ್ಮೀ ಹೆಬ್‌ಬಾಳ್‌ಕರ್ ಅವರು ತೀವ್ರ ಅಸಮಾಧಾನ ಹೊರ ಹಾಕಿ ಯಾವ ಮಾನದಂಡದಲ್ಲಿ ಜಯಮಾಲಾ ಅವರಿಗೆ ಅವಕಾಶ ನೀಡಲಾಗಿದೆ. ನನಗೆ ಅನ್ಯಾಯವಾಗಿದೆ. ಬಹುಷಃ ಜಯಮಾಲಾ ಅವರ ಸೇವೆ ಪಕ್ಷದ ನಾಯಕರಿಗೆ ಇಷ್ಟವಾಗಿರಬಹುದು ಎಂದಿದ್ದರು.
Comments are closed.