ಮನೋರಂಜನೆ

ಅಮೆರಿಕದಲ್ಲಿ ತೆಲುಗು ಚಿತ್ರರಂಗದ ವೇಶ್ಯಾಜಾಲ: ಇಬ್ಬರು ಪ್ರಸಿದ್ಧ ತೆಲುಗು ನಟಿಯರು ಶಾಮೀಲು

Pinterest LinkedIn Tumblr


ಹೈದರಾಬಾದ್‌: ಟಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನ ಪ್ರಖ್ಯಾತ ನಟಿಯರ ಹೆಸರು ಅಮೆರಿಕದ ವೇಶ್ಯಾವಾಟಿಕೆ ಜಾಲದ ಪಟ್ಟಿಯಲ್ಲಿರುವುದು ತಿಳಿದು ಬಂದಿದೆ.

ದಂಧೆಯ ಮುಖ್ಯಸ್ಥ ಕಿಶನ್‌ ಮೊಡುಗುಂಡಿ ಹಾಗೂ ಚಂದ್ರಕಲಾರನ್ನು ಬಂಧಿಸಿರುವ ಅಮೆರಿಕದ ಫೆಡರಲ್‌ ಏಜೆಂಟ್‌, ವಿಚಾರಣೆ ನಡೆಸಿದ್ದು, ದಂಧೆಯಲ್ಲಿ ದಕ್ಷಿಣ ರಾಜ್ಯಗಳ ಇಬ್ಬರು ಪ್ರಸಿದ್ಧ ಚಿತ್ರ ನಟಿಯರು ಶಾಮೀಲಾಗಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಕಿಶನ್‌ ಈ ಹಿಂದೆ ಟಾಲಿವುಡ್‌ನಲ್ಲಿ ಪ್ರೊಡಕ್ಷನ್‌ ಮ್ಯಾನೆಜರ್‌ ಆಗಿ ಕೆಲಸ ಮಾಡುತ್ತಿದ್ದ. ಅಮೆರಿಕಕ್ಕೆ ತನ್ನ ಪತ್ನಿ ಜತೆ ಬಂದು ದಂಧೆ ಆರಂಭಿಸಿದ್ದ ಎಂದು ತಿಳಿದು ಬಂದಿದೆ.

ಬೆಂಗಳೂರು ಹಾಗೂ ಚೆನ್ನೈನಿಂದ ನಟಿಯರನ್ನು ಕರೆಸಿಕೊಳ್ಳುತ್ತಿದ್ದರು. ಒಟ್ಟಾರೆ ಐವರು ಸಂತ್ರಸ್ತೆಯರ ಹೆಸರು ಹಾಗೂ ವಿವರಗಳು ಗೊತ್ತಾಗಿದ್ದು,ಇವರಲ್ಲಿ ಬೆಂಗಳೂರು ಹಾಗೂ ಚೆನ್ನೈನಿಂದ ತಲಾ ಒಬ್ಬರು ನಟಿಯ ಹೆಸರಿರುವುದಾಗಿ ತಿಳಿದು ಬಂದಿದೆ.

ಅಮೆರಿಕದಲ್ಲಿ ವೇಶ್ಯಾಜಾಲ: ಟಾಲಿವುಡ್‌ ನಿರ್ಮಾಪಕರ ಬಂಧನ

ಪ್ರಕರಣ ಬಯಲಿಗೆ ಬಂದಂತೆ, ಮಾಧ್ಯಮಗಳಲ್ಲಿ ನಟಿಯರ ಕುರಿತು ವಿವಿಧ ವಿಡಿಯೋ ತುಣುಕಗಳನ್ನು ಬಿತ್ತರಿಸಲಾಗುತ್ತಿದೆ. ಅಲ್ಲದೆ ಸಮಾಜಿಕ ತಾಣಗಳಲ್ಲಿ ಟ್ರೋಲ್‌ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ. ಯುಎಸ್‌ನ ತೆಲುಗು ಅಸೋಸಿಯೇಷನ್‌ ಸಮ್ಮೇಳನದಲ್ಲಿ ಭಾಗವಹಿಸಿದ ಇಬ್ಬರು ನಟಿಯರು, ಕಿಶನ್‌ ಜತೆ ಓಡಾಡುತ್ತಿರುವ ವೀಡಿಯೋ ತುಣುಕುಗಳೂ ಹರಿದಾಡತೊಡಗಿದೆ.

ಈ ವಿಚಾರಗಳನ್ನು ಚರ್ಚಿಸುವ ಉದ್ದೇಶದಿಂದ ಮೂವಿ ಆರ್ಟಿಸ್ಟ್‌ ಅಸೋಸಿಯೇಷನ್‌ ಜೂ.24ಕ್ಕೆ ಸಭೆ ಕೆರೆದಿದೆ.
ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ನಟಿ ಅನುಸೂಯ ಹಾಗೂ ಶ್ರೀರೆಡ್ಡಿ ಈ ಹಿಂದೆ ಕಿಶನ್‌ ತಮ್ಮನ್ನು ಸಂಪರ್ಕಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಅಮೆರಿಕಕ್ಕೆ ತರಳಲು ಒಪ್ಪಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಕಿಶನ್‌ ಅವರ ನಡವಳಿಕೆ ಕೆಲ ಸಮಯದಿಂದ ಅನುಮಾನಾಸ್ಪದವಾಗಿತ್ತು. ಅನೇಕ ಚಿತ್ರ ನಟಿಯರಿಗೆ ಹೊರ ದೇಶದಲ್ಲಿ ಕಾರ್ಯಕ್ರಮಗಳನ್ನು ನೀಡದಂತೆಯೂ ಮನವಿ ಮಾಡಲಾಗಿತ್ತು. ನಟಿಯರಿಗೆ ಅವರಿಗೆ ನೀಡುವ ವೀಸಾ ಕುರಿತು ಅವರಿಗೆ ಮಾಹಿತಿ ಇರುವುದಿಲ್ಲ. ಮುಂದಿನ ದಿನದಲ್ಲಿ ವಿದೇಶಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಮೂವಿ ಆರ್ಟಿಸ್ಟ್‌ ಅಸೋಸಿಯೇಷನ್‌ಗೆ ಕಾರ್ಯಕ್ರಮದ ವಿವರ ನೀಡಿ, ಆ ಮೂಲಕ ಕಾರ್ಯಕ್ರಮ ಆಯೋಜಕರೊಂದಿಗೆ ನೇರ ಸಂಪರ್ಕ ಹೊಂದುವ ಬಗ್ಗೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷ ಶಿವರಾಜ್‌ ರಾಜ ಹೇಳಿದ್ದಾರೆ.

Comments are closed.