ಮನೋರಂಜನೆ

ನಿಶ್ಚಿತಾರ್ಥದ ವಾರ್ಷಿಕೋತ್ಸವಕ್ಕೆ ಭಾವಿ ಪತ್ನಿಗೆ ರಕ್ಷಿತ್ ರೋಮ್ಯಾಂಟಿಕ್ ಪತ್ರ!

Pinterest LinkedIn Tumblr


ಬೆಂಗಳೂರು: ಸ್ಯಾಂಡಲ್‍ವುಡ್ ಕ್ಯೂಟ್ ಕಪಲ್ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಆಗಿ ಇಂದಿಗೆ ಒಂದು ವರ್ಷ ಆಗಿದೆ. ಇದೇ ಖುಷಿಯಲ್ಲಿ ರಕ್ಷಿತ್ ಶೆಟ್ಟಿ ತನ್ನ ಭಾವಿ ಪತ್ನಿಗೆ ರೋಮ್ಯಾಂಟಿಕ್ ಪತ್ರ ಬರೆದಿದ್ದಾರೆ.

ಕಳೆದ ವರ್ಷ ಜುಲೈ 3ರಂದು ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಇಬ್ಬರಿಗೂ ನಿಶ್ಚಿತಾರ್ಥ ಆಗಿ ಒಂದು ವರ್ಷ ಕಳೆದಿದೆ. ಒಂದು ವರ್ಷದ ಸಂಭ್ರಮದಲ್ಲಿ ರಕ್ಷಿತ್ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋವನ್ನು ಹಾಕಿದ್ದಾರೆ.

ನಮ್ಮ ನಿಶ್ಚಿತಾರ್ಥ ಆಗಿ ಆಗಲೇ ಒಂದು ವರ್ಷ ಆಯ್ತಾ? ನನಗೆ ನಿನ್ನೆ ನಮ್ಮ ನಿಶ್ಚಿತಾರ್ಥ ಆಗಿದೆ ಎಂದು ಎನಿಸುತ್ತಿದೆ. ಏಕೆಂದರೆ ನಿನ್ನ ಸುಂದರವಾದ ಔಟ್ ಫಿಟ್‍ಗೆ ಮ್ಯಾಚ್ ಮಾಡಲು ನಾನು ಇನ್ನೂ ಟೈ ಹುಡುಕುತ್ತಿದ್ದೇನೆ ಎಂದು ಎನಿಸುತ್ತಿದೆ. ಈಗ ನಾನು ನಮ್ಮಿಬ್ಬರ ನಿಶ್ಚಿತಾರ್ಥದ ಫೋಟೋ ಹಾಗೂ ವಿಡಿಯೋಗಳನ್ನು ನೋಡುತ್ತಿದ್ದೇನೆ ಎಂದು ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕುವುದರ ಮೂಲಕ ಪೋಸ್ಟ್ ಮಾಡಿದ್ದಾರೆ.

ಒಂದು ವರ್ಷದಲ್ಲಿ ನಿನ್ನ ಜೊತೆ ಇದ್ದು ನಾನು ಏನೋ ಸಂಪಾದನೆ ಮಾಡಿಕೊಂಡಿದ್ದೇನೆ. ನಿನ್ನ ಜೊತೆ ಇದ್ದು ನಾನು ಸಾಕಷ್ಟು ವಿಷಯಗಳನ್ನು ಕಲಿತುಕೊಂಡಿದ್ದೇನೆ. ಅಲ್ಲದೇ ನಿನ್ನಂದ ದೂರವಿದ್ದು ನಾನು ತುಂಬಾ ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದೇನೆ. ರಶ್ಮಿಕಾ ನೀನು ನನ್ನ ಜೀವನದಲ್ಲಿ ಪರಿಚಯವಾದ ಅತ್ಯುತ್ತಮ ವ್ಯಕ್ತಿ. ಪ್ರತಿದಿನ ನಿನ್ನನ್ನು ಹೆಚ್ಚು ಪ್ರೀತಿಸುತ್ತೇನೆ. ನಮ್ಮ ಒಂದು ವರ್ಷದ ವಾಷಿಕೋತ್ಸವಕ್ಕೆ ಶುಭಾಶಯ ಎಂದು ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ರಕ್ಷಿತ್ ಹಾಗೂ ರಶ್ಮಿಕಾ ನಿಶ್ಚಿತಾರ್ಥ ಮಾಡಿಕೊಂಡು ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯೂಸಿ ಆಗಿದ್ದಾರೆ. ಈ ಜೋಡಿ ಯಾವಾಗ ಮದುವೆಯಾಗಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

Comments are closed.