ಬೆಂಗಳೂರು: ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಪಾಲಿಗೆ ಜುಲೈ 6 ಅತ್ಯಂತ ಮಹತ್ವದ ದಿನ. ಅವರು ತಮ್ಮ ಜೀವನದಲ್ಲೆ ಎಂದೂ ಮರೆಯದ ದಿನ ಇದೆಂದು ಸುದೀಪ್ ಹೇಳಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಈ ಸಂಬಂಧ ಟ್ವೀಟ್ ಮಾಡಿದ್ದು ಜುಲೈ 6 ಅವರ ಚಿತ್ರ ಜೀವನದಲ್ಲಿ ಎರಡು ಕಾರಣಕ್ಕಾಗಿ ಮುಖ್ಯವಾಗಿದೆ. ಜುಲೈ 6 2001 ರಲ್ಲಿ ಸುದೀಪ್ ನಟನಾಗಿ ಅಭಿನಯದ ಹುಚ್ಚ’ ಸಿನಿಮಾ ಬಿಡುಗಡೆಯಾಗಿತ್ತು.ಅದಲ್ಲದೆ ತೆಲುಗು ಚಿತ್ರರಂಗದಲ್ಲಿ ಕಿಚ್ಚ ಸುದೀಪ್ ಅವರಿಗೆ ಪ್ರಖ್ಯಾತಿಯನ್ನು ತಂದು ಕೊಟ್ಟ `ಈಗ’ ಚಿತ್ರ ಕೂಡ 2012 ಜುಲೈ 6 ರಂದೇ ಬಿಡುಗಡೆಗೊಂಡಿತ್ತು.
ಈ ಕಾರಣಕ್ಕಾಗಿ ಸುದೀಪ್ ತಮ್ಮ ಚಿತ್ರ ಜೀವನದಲ್ಲಿ ತಿರುವು ನೀಡಿದ ಈ ದಿನವನ್ನು ಮರೆಯಲಾರೆ ಎಂದು ಹೇಳಿದ್ದಾರೆ. `ಹುಚ್ಚ’ ಮತ್ತು `ಈಗ’ ಎರಡು ಸಿನಿಮಾ ತಂಡಕ್ಕೆ ಧನ್ಯವಾದ ಹೇಳುವ ನಟ ಈ ದಿನ ನನಗೆ ಬಹಳ ವಿಶೇಷ, ಒಬ್ಬ ನಟನಾಗಿ ನನ್ನನ್ನು ಪರಿಚಯಿಸಿದ ದಿನ ಇದು. ಅಭಿಮಾನಿಗಳು ನನ್ನನ್ನು ಮನದಲ್ಲಿ ಇರಿಸಿಕೊಂಡಿದ್ದಾರೆ. ಎಂದು ಟ್ವಿಟ್ ಮಾಡಿದ್ದಾರೆ.
Comments are closed.