ಮುಂಬೈ: ರಾಜ್ ಕುಮಾರ್ ಹಿರಾನಿ ನಿರ್ದೇಶನದ ರಣ್‌ಬೀರ್ ಕಪೂರ್ ಅಭಿನಯದ ಸಂಜಯ್ ದತ್ ಬದುಕಿನ ಕುರಿತ ಸಿನೆಮಾ ಸಂಜು ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರದ ದಾಖಲೆ ಮಾಡಿದ್ದು, ಅಮೀರ್ ಖಾನ್ ಅಭಿನಯಿಸಿದ್ದ ‘3 ಈಡಿಯೆಟ್ಸ್’ ಚಿತ್ರದ ದಾಖಲೆಯನ್ನು ಮುರಿದಿದೆ.
ಚಿತ್ರ ಬಿಡುಗಡೆಯಾದ ಏಳನೇ ದಿನಕ್ಕೆ 16.10 ಕೋಟಿಯನ್ನು ಸಂಪಾದಿಸಿದ್ದು, ಒಟ್ಟಾರೆ 202.51 ಕೋಟಿ ದಾಖಲೆಯ ಹಣ ಸಂಗ್ರಹ ಮಾಡಿದೆ.
ಈ ಹಿಂದೆ ಅಮೀರ್ ಖಾನ್ ಅಭಿನಯದಲ್ಲಿ ರಾಜ್ ಕುಮಾರ್ ಹಿರಾನಿಯೇ ನಿರ್ದೇಶಿಸಿದ್ದ ‘3 ಈಡಿಯಟ್ಸ್’ ಸಿನಿಮಾ ಮೊದಲ ಏಳು ದಿನದಲ್ಲಿ 202.47 ಕೋಟಿ ರೂ. ಗಳಿಸಿತ್ತು. ಆದರೆ, ಇದೀಗ ಸಂಜು 3 ಈಡಿಯಟ್ಸ್ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದೆ. ಈ ವರ್ಷದ ಅತಿ ದೊಡ್ಡ ಯಶಸ್ಸು ಕಂಡಿರುವ ಸಂಜು ಸಿನೆಮಾ 200 ಕೋಟಿ ಕ್ಲಬ್‌ಗೆ ಸೇರಿದೆ.
ಬಾಲಿವುಡ್‌ನ ಖ್ಯಾತ ಚಿತ್ರ ವಿಮರ್ಶಕ ತರುಣ್ ಆದರ್ಶ್ ಅವರು ಈ ಕುರಿತು ಟ್ವೀಟ್ ಮಾಡಿದ್ದು, ಸಂಜು ಸಿನಿಮಾ ಮೊದಲ ಏಳು ದಿನಗಳಲ್ಲಿ ಎಷ್ಟು ಗಳಿಸಿದೆ ಎಂಬುದನ್ನು ತಿಳಿಸಿದ್ದಾರೆ.
ಶುಕ್ರವಾರ – ಮೊದಲ ದಿನ 34.7 ಕೋಟಿ ರೂ.
ಶನಿವಾರ – ಎರಡನೇ ದಿನ 38.6 ಕೋಟಿ ರೂ.
ಭಾನುವಾರ – ಮೂರನೇ ದಿನ 46.7 ಕೋಟಿ ರೂ.
ಸೋಮವಾರ – ನಾಲ್ಕನೇ ದಿನ 25.3 ಕೋಟಿ ರೂ.
ಮಂಗಳವಾರ – ಐದನೇ ದಿನ 22.1 ಕೋಟಿ ರೂ.
ಬುಧವಾರ – ಆರನೇ ದಿನ 18.9 ಕೋಟಿ ರೂ.
ಗುರುವಾರ – ಏಳನೇ ದಿನ 16.1 ಕೋಟಿ ರೂ.
Comments are closed.