ಮುಂಬೈ: ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಖಾನ್ ಕುಟುಂಬ ಇಟಲಿಯ ಪ್ರವಾಸದಲ್ಲಿದೆ. ಶಾರೂಖ್ ಖಾನ್ ಕುಟುಂಬಸ್ಥರು ಇಟಲಿಯಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಎಲ್ಲ ಫೋಟೋಗಳ ನಡುವೆ ಸುಹಾನಾಳ ಬಿಕಿನಿಯ ಚಿತ್ರ ಮಾತ್ರ ಪಡ್ಡೆ ಹುಡುಗರು ಗಮನ ಸೆಳೆದಿದೆ.
ಸದ್ಯ ಶಾರೂಖ್ ಅಭಿನಯದ ಜೀರೋ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಕಿಂಗ್ ಖಾನ್ ಕುಟುಂಬದೊಂದಿಗೆ ರಜೆಯ ದಿನಗಳನ್ನು ಕಳೆಯುತ್ತಿದ್ದಾರೆ. ಸುಹನಾ ಖಾನ್ ಎರಡು ದಿನಗಳ ಹಿಂದೆ ಬಿಕಿನಿ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದರು. ಸದ್ಯ ಈ ಫೋಟೋ ಎಲ್ಲರ ಹುಬ್ಬೇರುವಂತೆ ಮಾಡಿದ್ದು, ಭವಿಷ್ಯದಲ್ಲಿ ಸುಹಾನಾ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಸಿನಿ ಅಡ್ಡದಲ್ಲಿ ಕೇಳಿ ಬರುತ್ತಿವೆ. ಇದನ್ನು ಓದಿ: ಕೆಕೆಆರ್ ತಂಡದ ಕ್ರಿಕೆಟಿಗನ ಮೇಲೆ ಸುಹಾನಾಗೆ ಪ್ಯಾರ್!
ಶಾರೂಖ್ ಪುತ್ರ ಆರ್ಯನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ತಮ್ಮ ಅಬ್ರಾಮ್ ಜೊತೆಗಿರುವ ಫೋಟೋ ಹಾಕಿಕೊಂಡಿದ್ದು, ಹಿಂದಿನಿಗಿಂತಲೂ ಡಿಫರೆಂಟ್ ಲುಕ್ನಲ್ಲಿ ಮಿಂಚಿದ್ದಾರೆ. ಉದ್ದ ತೋಳಿನ ನೀಲಿ ಬಣ್ಣದ ಟೀಶರ್ಟ್ ಧರಿಸಿರುವ ಆರ್ಯನ್ ತಂದೆಯಂತೆ ಕಾಣುತ್ತಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬದಂದೇ ಮಗಳ ಕಾನೂನುಬಾಹಿರ ಕೆಲಸದ ಬಗ್ಗೆ ರಿವೀಲ್ ಮಾಡಿದ್ರು ಶಾರೂಖ್!
ಜೀರೋ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಶಾರೂಕ್ ಜೊತೆಯಾಗಿ ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್ ನಟಿಸಿದ್ದಾರೆ. ಈ ಹಿಂದೆ `ಜಬ್ ತಕ್ ಹೈ ಜಾನ್’ ಚಿತ್ರದಲ್ಲಿ ಇದೇ ಮೂವರು ಜೊತೆಯಾಗಿ ತೆರೆಯನ್ನು ಹಂಚಿಕೊಂಡಿದ್ದರು.
Comments are closed.