ಉದಕಮಂಡಲಂ(ತಮಿಳುನಾಡು): ಪ್ರಖ್ಯಾತ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರ ಪುತ್ರನ ಮದುವೆ ರದ್ದಾಗಿದೆ. ವರನ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಹಾಗು ವಂಚನೆ ದೂರು ನೀಡಿರುವ ಹಿನ್ನೆಲೆಯಲ್ಲಿ ಮದುವೆ ರದ್ದುಗೊಂಡಿದೆ ಎಂದು ಪೋಲೀಸರು ಹೇಳಿದರು.
ತಮಿಳುನಾಡಿನ ಊಟಿಯಲ್ಲಿದ್ದ ಮಿಥುನ್ ಚಕ್ರವರ್ತಿಯವರ ಐಷಾರಾಮಿ ಹೋಟೆಲ್ ನಲ್ಲಿ ಮದುವೆಗೆ ಸಕಲ ಸಿದ್ದತೆಗಳಾಗಿದ್ದವು. ಆದರೆ ಸ್ಥಳಕ್ಕೆ ಆಗಮಿಸಿದ ಪೋಲೀಸರು ಮದುವೆಯನ್ನು ನಿಲ್ಲಿಸಿದ್ದಾರೆ. ಮದುವೆ ರದ್ದಾದದ್ದರಿಂದ ಬೇಸರಗೊಂಡ ವಧುವಿನ ಮನೆಯವರು ಹೋಟೆಲ್ ನಿಂದ ತೆರಳಿದ್ದಾರೆ.
ಸಧ್ಯ ಮಿಥುನ್ ಪತ್ನಿ ಯೋಗಿತಾ ಬಾಲಿ ಹಾಗೂ ಪುತ್ರ ಮಹಾಅಕ್ಷಯ್ ಅವರುಗಳು ನಿರೀಕ್ಷಣಾ ಜಾಮೀನು ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಬಂಧನದಿಂದ ಬಚಾವ್ ಆಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿಡಿದೆ.
ಮಹಾಅಕ್ಷಯ್ ತನ್ನನ್ನು ವಿವಾಹವಾಗುವುದಾಗಿ ನಂಬಿಸಿ ಕಳೆದ ನಾಲ್ಕು ವರ್ಷಗಳಿಂದ ನನ್ನ ಜತೆ ಲೈಂಗಿಕ ಸಂಬಂಧ ಹೊಂದಿದ್ದನು, ಇದೀಗ ಬೇರೆ ಯುವತಿಯೊಡನೆ ವಿವಾಹವಾಗುವ ಮೂಲಕ ವಂಚಿಸಿದ್ದಾರೆ. ನಾನು ಗರ್ಭವತಿಯಾಗುವೆನೆಂದು ತಿಳಿದಾಗ ಮಹಾಅಕ್ಷಯ್ ಕೆಲ ಮಾತ್ರೆಗಳನ್ನು ಕೊಟ್ಟು ನನಗೆ ಗರ್ಭಪಾತವಾಗುವಂತೆ ಮಾಡಿದ್ದರು. ಇದಾದ ಬಳಿಕ ಸಂಬಂಧ ಮುಂದುವರಿಸುವುದು ಬೇಡ ವೆಂದು ಆತ ಹಾಗೂ ಅವನ ತಾಯಿ ಯೋಗಿತಾ ನನಗೆ ಹೇಳಿದುದಲ್ಲದೆ ಈ ಸಂಬಂಧ ಯಾರೊಡನೆ ವಿವರ ಹಂಚಿಕೊಂಡಲ್ಲಿ ಮುಂದೆ ಅಪಾಯ ಕಾದಿರುವುದಾಗಿ ಬೆದರಿಕೆ ಹಾಕಿದ್ದರು. ಅವರ ಬೆದರಿಕೆಯಿಂದಾಗಿ ಮುಂಬೈ ನಿಂದ ನಾನು ನವದೆಹಲಿಗೆ ವಾಸ್ತವ್ಯ ಬದಲಾಯಿಸಿದ್ದೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಗುರುವಾರ ಯೋಗಿತಾ ಹಾಗೂ ಮಹಾಅಕ್ಷಯ್ ಅವರಿಗೆ ಜಾಮೀನು ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿತ್ತು.
Comments are closed.