ಮನೋರಂಜನೆ

ಡಿಸೆಂಬರ್​ನಲ್ಲಿ ನಟ ದಿಗಂತ್ – ಐಂದ್ರಿತಾ ಮದುವೆ

Pinterest LinkedIn Tumblr

ಬೆಂಗಳೂರು: ಚಂದನವನದ ಮೋಸ್ಟ್ ಪಾಪ್ಯುಲರ್​ ಜೋಡಿ ದಿಗಂತ್ ಹಾಗೂ ಐಂದ್ರಿತಾ ಮದುವೆ ಯಾವಾಗ ಎಂಬ ಹಲವು ವರ್ಷಗಳ ಪ್ರಶ್ನೆಗೆ ಕಡೆಗೂ ಉತ್ತರ ಸಿಕ್ಕಿದೆ.

ಹೌದು, ಈ ಪ್ರಶ್ನೆಗೆ ಖುದ್ದು ನಟ ದಿಗಂತ್​ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ತಾಯಿಯ ಸಮ್ಮುಖದಲ್ಲಿಯೇ ಮದುವೆ ಬಗ್ಗೆ ಹೇಳಿಕೊಂಡಿರುವ ದಿಗಂತ್​, “ಎಲ್ಲವೂ ಓಕೆ ಆದರೆ ಡಿಸೆಂಬರ್​ನಲ್ಲಿ ಮದುವೆಯಾಗುತ್ತೇವೆ,” ಎನ್ನುವ ಮೂಲಕ ದೊಡ್ಡ ಮಟ್ಟದ ಕ್ಯೂರಿಯಾಸಿಟಿಗೆ ಬ್ರೇಕ್ ಹಾಕಿದ್ದಾರೆ.

ಐಂದ್ರಿತಾ ಬಗ್ಗೆ ಮಾತನಾಡಿದ ದಿಗಂತ್​, “ಐಂದ್ರಿತಾ ವಿಷಯದಲ್ಲಿ ನಾನು ಅದೃಷ್ಟ ಮಾಡಿದ್ದೇನೆ. ಅವಳಿಗೂ ಹವ್ಯಕ ಹೇಳಿಕೊಡುತ್ತಿದ್ದೇನೆ. ಆಗಾಗ ಸಾಗರಕ್ಕೆ ಕರೆದುಕೊಂಡು ಹೋಗುತ್ತಿರುತ್ತೇನೆ. ನಮ್ಮ ಅಜ್ಜಿಗೆ ಅವಳಂದ್ರೆ ಬಹಳ ಖುಷಿ,” ಎಂದು ಸಂತಸ ವ್ಯಕ್ತ ಪಡಿಸಿದರು.

Comments are closed.