ಮನೋರಂಜನೆ

ಕೌಟುಂಬಿಕ ಕಲಹಕ್ಕೆ ತಮಿಳು ಟಿವಿ ಚಾನಲ್‌ ನಟಿ ಆತ್ಮಹತ್ಯೆ

Pinterest LinkedIn Tumblr


ಚೆನ್ನೈ: ತಮಿಳು ಟಿವಿ ಚಾನಲ್‌ ನಟಿ ಆತ್ಮಹತ್ಯೆಗೆ ಬುಧವಾರ ಶರಣಾಗಿದ್ದು, ಹಣದ ವಿಚಾರವಾಗಿ ಪತಿಯೊಂದಿಗಿನ ಮನಸ್ತಾಪದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಪೊಲೀಸರು ಆಕೆಯ ಗಂಡನನ್ನು ವಿಚಾರಣೆಗೊಳಪಡಿಸಿದ್ದಾರೆ

32 ವರ್ಷದ ನಟಿ ಪ್ರಿಯಾಂಕ, ಹಲವು ತಮಿಳು ಧಾರವಾಹಿಗಳಲ್ಲಿ ನಟಿಸಿದ್ದು, ಬಾಹುಬಲಿ ಖ್ಯಾತಿಯ ರಮ್ಯಾ ಕೃಷ್ಣ ಅವರೊಂದಿಗೂ ‘ವಂಶಂ’ನಲ್ಲಿ ನಟಿಸಿದ ಬಳಿಕ ಗುರುತಿಸಿಕೊಂಡಿದ್ದರು.

ಮನೆಕೆಲಸದಾಕೆ ಇಂದು ಮುಂಜಾನೆ ಬಂದು ಕರೆದಾಗ ಯಾರೊಬ್ಬರು ಮನೆ ಬಾಗಿಲನ್ನು ತೆರೆದಿಲ್ಲ. ಇದರಿಂದ ಅನುಮಾನಗೊಂಡು ಕಿಟಕಿಯಿಂದ ನೋಡಿದಾಗ ಪ್ರಿಯಾಂಕ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

ಕೂಡಲೇ ಈ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿದ್ದು, ಪತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗ ಕಳುಹಿಸಲಾಗಿದೆ.

ಸ್ಥಳದಲ್ಲಿ ಡೆತ್‌ ನೋಟ್‌ ಪತ್ತೆಯಾಗಿಲ್ಲ. ಸಂಪಾದನೆ ವಿಚಾರವಾಗಿ ಪ್ರಿಯಾಂಕ ಮತ್ತು ಆಕೆಯ ಪತಿ ನಡುವೆ ಮನಸ್ತಾಪ ಉಂಟಾಗಿತ್ತು. ಅದೇ ಆತ್ಮಹತ್ಯೆಗೆ ಕಾರಣವಾಗಿರಬಹುದು. ಕಳೆದ ನಾಲ್ಕು ವರ್ಷಗಳ ಹಿಂದೆ ಅರುಣ್‌ನನ್ನು ವರಿಸಿದ್ದ ಪ್ರಿಯಾಂಕ ಮತ್ತು ಪತಿ ಒಟ್ಟಿಗೆ ವಾಸಿಸುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಫುಟ್‌ಬಾಲ್‌ ಕೋಚ್‌ ಆಗಿದ್ದ ಅರುಣ್‌ ಬ್ಯುಸಿನೆಸ್‌ ಶುರುಮಾಡಲು ಯತ್ನಿಸುತ್ತಿದ್ದ. ದಂಪತಿ ನಡುವೆ ಆಗಾಗ ಕಲಹ ಉಂಟಾಗುತ್ತಿತ್ತು. ಪ್ರಿಯಾಂಕ ಮನೆಗೆ ತಡವಾಗಿ ಬರುವುದನ್ನು ಅರುಣ್‌ ಸಹಿಸುತ್ತಿರಲಿಲ್ಲ. ಈ ವಿಚಾರವಾಗಿ ಇಬ್ಬರು ವಕೀಲರನ್ನು ಭೇಟಿ ಮಾಡಿದ್ದರು ಕೂಡ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.