ಮನೋರಂಜನೆ

ತುಳು ಚಿತ್ರರಂಗಕ್ಕೆ ಅಡಿಯಿಟ್ಟ ರಂಗಾಯಣ ರಘು

Pinterest LinkedIn Tumblr


ತುಳು ಚಿತ್ರೋದ್ಯಮ ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತಾ ಸಾಗುತ್ತಿದೆ. ಕೋಸ್ಟಲ್‍ವುಡ್‌ನಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಸ್ಯಾಂಡಲ್‍ವುಡ್ ತಾರೆಗಳು ತುಳು ಚಿತ್ರಗಳಲ್ಲಿ ಬಣ್ಣ ಹಚ್ಚುತ್ತಾ ಇನ್ನಷ್ಟು ಸ್ಫೂರ್ತಿ ತುಂಬುತ್ತಿದ್ದಾರೆ.

ಇದೀಗ ಕಾಮಿಡಿ ನಟ ರಂಗಾಯಣ ರಘು ಸಹ ತುಳು ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ. ಮೈ ನೇಮ್ ಈಸ್ ಅಣ್ಣಪ್ಪ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಮಯೂರ್ ಶೆಟ್ಟಿ ನಿರ್ದೇಶನದ ಈ ಚಿತ್ರ ಮಾಸ್ ಎಂಟರ್‌ಟೇನರ್ ಆಗಿದ್ದು ರಂಗಾಯಣ ರಘು ಚಿತ್ರದಲ್ಲಿ ಸಂಗೀತ ಶಿಕ್ಷಕರಾಗಿ ಕಾಣಿಸಲಿದ್ದಾರೆ.

ಒಟ್ಟಾರೆ ರಂಗಾಯಣ ರಘು ಅವರ ಇಮೇಜ್‌ಗೆ ತಕ್ಕಂತೆ ಪಾತ್ರವನ್ನು ಹೆಣೆಯಲಾಗಿದ್ದು ಅವರ ಆಗಮನದಿಂದ ಸಿನಿಮಾ ಇನ್ನೊಂದು ಹಂತಕ್ಕೇರಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಮಯೂರ್.

“ರಂಗಾಯಣ ರಘು ಅವರ ಭಿನ್ನ ಅಭಿನಯ ನಮ್ಮ ಚಿತ್ರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್. ಮಂಗಳೂರಿನ ಭಾಷೆಯಲ್ಲಿ ಮಾತನಾಡುವ ಪಾತ್ರ. ರಂಗಾಯಣ ರಘು ಎರಡು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಬೇಕಿತ್ತು. ಆದರೆ ಮಳೆ ಅಡ್ಡಿಯಾದ ಕಾರಣ ಬೇರೆ ಚಿತ್ರಗಳಲ್ಲಿ ಅವರು ನಟಿಸಬೇಕಿದ್ದು ಬೆಂಗಳೂರಿಗೆ ಹಿಂತಿರುಗಿದ್ದಾರೆ. ಶೀಘ್ರದಲ್ಲೇ ಅವರು ಮೈ ನೇಮ್ ಈಸ್ ಅಣ್ಣಪ್ಪ ಚಿತ್ರೀಕರಣಕ್ಕೆ ಆಗಮಿಸಲಿದ್ದಾರೆ” ಎಂಬ ವಿಶ್ವಾಸವನ್ನು ನಿರ್ದೇಶಕರು ವ್ಯಕ್ತಪಡಿಸಿದ್ದಾರೆ.

ವಿಶೇಷ ಎಂದರೆ ‘ಪಿಲಿಬೈಲ್ ಯಮುನಕ್ಕ’ ಚಿತ್ರದ ತಾಂತ್ರಿಕ ಬಳಗವೂ ಈ ಚಿತ್ರದಲ್ಲಿ ತೊಡಗಿಕೊಂಡಿರುವುದು. ನಿರ್ಮಾಪಕ ರೋಹನ್ ಶೆಟ್ಟಿ ಮತ್ತು ಸಂಗೀತ ನಿರ್ದೇಶಕ ಕಿಶೋರ್ ಕುಮಾರ್ ಶೆಟ್ಟಿ ಚಿತ್ರತಂಡದಲ್ಲಿದ್ದಾರೆ.

Comments are closed.