ಮನೋರಂಜನೆ

ಮತ್ತೊಂದು ಸಂಕಷ್ಟದಲ್ಲಿ ನಟ ದುನಿಯಾ ವಿಜಿ ! ಮೊದಲ ಪತ್ನಿಯಿಂದ 2ನೇ ಪತ್ನಿ ವಿರುದ್ಧ ಹಲ್ಲೆ ದೂರು!

Pinterest LinkedIn Tumblr

ಬೆಂಗಳೂರು: ಮಾರುತಿ ಗೌಡ ಅಪಹರಣ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧ ನಟ ದುನಿಯಾ ವಿಜಯ್ ಬಂಧಿತನಾಗಿದ್ದು ಇದರ ಬೆನ್ನಲ್ಲೇ ಮೊದಲ ಪತ್ನಿ ನಾಗರತ್ನ ಎರಡನೇ ಪತ್ನಿ ಕೀರ್ತಿ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿದ್ದಾರೆ.

ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿ ಗೌಡ ಹಾಗೂ ಇಬ್ಬರು ಬೌನ್ಸರ್ ಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿ ನಾಗರತ್ನ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ಕೀರ್ತಿ ಗೌಡ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ದುನಿಯಾ ವಿಜಯ್ ಬಂಧನದ ವೇಳೆ ಮಗ ಸಾಮ್ರಾಟ್ ವಿಜಯ್ ಜೊತೆ ಇದ್ದಿದ್ದರಿಂದ ನಾಗರತ್ನ ಅವರು ಮಗ ಬಗ್ಗೆ ವಿಚಾರಿಸಲು ಹೋದ ಸಂದರ್ಭದಲ್ಲಿ ಕೀರ್ತಿ ಗೌಡ ಹಾಗೂ ಇಬ್ಬರು ಬೌನ್ಸರ್ ಗಳು ಹಲ್ಲೆ ಮಾಡಿದ್ದಾರೆ ಎಂದು ನಾಗರತ್ನ ದೂರು ದಾಖಲಿಸಿದ್ದಾರೆ.

ದುನಿಯಾ ವಿಜಯ್ ಮಾರುತಿ ಗೌಡ ಮೇಲೆ ಹಲ್ಲೆ ನಡೆಸಿದ ಸಂದರ್ಭದಲ್ಲಿ ಸಾಮ್ರಾಟ್ ಸಹ ಜೊತೆಯಲ್ಲಿದ್ದ ಆತನ ಮೇಲೆ ಸಹ ಹಲ್ಲೆಯಾಗಿದೆ ಎಂಬ ವರದಿ ಮಾಧ್ಯಮಗಳಲ್ಲಿ ಬಿತ್ತರಗೊಂಡ ಹಿನ್ನೆಲೆಯಲ್ಲಿ ನೊಂದ ನಾಗರತ್ನ ಅವರು ಮಗನ ಯೋಗಕ್ಷೇಮ ವಿಚಾರಿಸಲು ಕೀರ್ತಿಗೌಡ ಮನೆಗೆ ಹೋಗಿದ್ದಾಗ ಹಲ್ಲೆ ನಡೆದಿದೆ.

Comments are closed.