ಮನೋರಂಜನೆ

ನಟ ದುನಿಯಾ ವಿಜಯ್​ 2ನೇ ಪತ್ನಿ ವಿರುದ್ಧ ಮೊದಲ ಪತ್ನಿ ದೂರು

Pinterest LinkedIn Tumblr


ಬೆಂಗಳೂರು: ಕೆಟ್ಟ ಸಮಯ ಶುರುವಾದರೆ ಒಂದರ ಮೇಲೆ ಒಂದು ಏಟು ಎನ್ನುವ ಪರಿಸ್ಥಿತಿ ಸದ್ಯ ನಟ ದುನಿಯಾ ವಿಜಯ್​ ಅವರದು. ಒಂದು ಕಡೆ ಟ್ರೈನರ್​ ಮಾರುರಿ ಗೌಡನ ಮೇಲೆ ಹಲ್ಲೆ ಮಾಡಿ ಜೈಲು ಪಾಲಾಗುವ ಆತಂಕದಲ್ಲಿ ದುನಿಯಾ ವಿಜಿ ಇದ್ದರೆ, ಇನ್ನೊಂದು ಕಡೆ ಆಸ್ತಿಗಾಗಿ ಆತನ ಇಬ್ಬರು ಹೆಂಡತಿಯರು ಜಗಳ ಆರಂಭಿಸಿದ್ದಾರೆ.

ನಾಗರತ್ನ ಎಂಬಾಕೆಯನ್ನು ಮದುವೆಯಾಗಿ ಮೂರು ಮಕ್ಕಳನ್ನು ಹೊಂದಿರುವ ದುನಿಯಾ ವಿಜಯ್​ ಚಿತ್ರರಂಗದಲ್ಲಿ ಯಶಸ್ಸು ಕಾಣುತ್ತಿದ್ದಂತೆ ಕುಟುಂಬದಲ್ಲಿ ಕಲಹ ಶುರುವಾಯಿತು. ಕಡೆಗೆ ಈ ಜಗಳ ಯಾವ ಮಟ್ಟಿಗೆ ಹೋಯಿತು ಎಂದರೆ ಹೆಂಡತಿಗೆ ಬೆದರಿಕೆ ಹಾಕುವ ಮಟ್ಟಕ್ಕೆ. ಈ ಕಲಹ ಪೊಲೀಸ್​ ಠಾಣೆಗೆ ಹೋಗಿ ತಮಗೆ ತಮ್ಮ ಗಂಡನಿಂದಲೇ ಪ್ರಾಣ ಬೆದರಿಕೆ ಇದೆ. ಅಲ್ಲದೇ ತಮ್ಮ ಸಂಬಂಧಿ ಶಿವಶಂಕರ ಗೌಡ ಎಂಬುವನ ಮೇಲೆ ವಿಜಯ್​ ಹಲ್ಲೆ ಮಾಡಿದ್ದಾರೆ ಎಂದು ನಾಗರತ್ನ 2013ರಲ್ಲಿ ಚನ್ನಮ್ಮ ಅಚ್ಚುಕಟ್ಟು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು.

ಇದಾದ ಬಳಿಕ ನಾಗರತ್ನ ವಿಜಯ್​ ಜೀವನದಿಂದ ಹೊರ ಹೋದರು. ಈ ವೇಳೆ ದುನಿಯಾ ವಿಜಯ್​ ಬಾಳಿಗೆ ನಟಿ ಕೀರ್ತಿ ಗೌಡ ಪ್ರವೇಶ ಮಾಡಿದರು. ಕಾನೂನಾತ್ಮಕವಾಗಿ ಮೊದಲ ಹೆಂಡತಿ ಬದುಕಿರುವಾಗಲೇ ದುನಿಯಾ ವಿಜಯ್​ ಎರಡನೇ ಮದುವೆಯಾಗಿದ್ದಾರೆ. ವಿಜಯ್​ ಕೂಡ ತನ್ನ ಎರಡನೇ ಹೆಂಡತಿ ಎಂದು ಆಕೆಯನ್ನು ಸಮಾಜದ ಮುಂದೆ ಒಪ್ಪಿಕೊಂಡರು.

ಇದರಿಂದಾಗಿ ಕೀರ್ತಿ ಕೂಡ ವಿಜಯ್​ ತನ್ನನ್ನು ಹೆಂಡತಿ ಎಂದು ಸಮಾಜದಲ್ಲಿ​ ಒಪ್ಪಿಕೊಂಡಿದ್ದು, ತನಗೂ ಕೂಡ ಆಸ್ತಿಯಲ್ಲಿ ಪಾಲು ಬರಬೇಕು ಎಂದು ಮೊದಲ ಹೆಂಡತಿ ಬಳಿ ತಕರಾರು ತೆಗೆದಿದ್ದರು.

ಇನ್ನು ಇಂದು ದುನಿಯಾ ವಿಜಯ್​ ಬಂಧನವಾಗುತ್ತಿದ್ದಂತೆ ತಮ್ಮ ಮಗನ ಬಗ್ಗೆ ವಿಚಾರಿಸಲು ನಾಗರತ್ನ ಕೀರ್ತಿ ಮನೆಗೆ ಹೋಗಿದ್ದಾರೆ. ಈ ವೇಳೆ ಆಸ್ತಿ ಕಲಹದ ಹಿನ್ನಲೆ ಇಬ್ಬರು ಬೌನ್ಸರ್​ ಜೊತೆ ಸೇರಿ ಕೀರ್ತಿ ಗೌಡ ನಾಗರತ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ನಾಗರತ್ನ ಗಿರಿನಗರ ಪೊಲೀಸ್​ ಠಾಣೆಯಲ್ಲಿ ಕೀರ್ತಿ ವಿರುದ್ಧ ಎಫ್ ಐ ಆರ್ ದಾಖಲು ಮಾಡಿದ್ದಾರೆ.

ಇತ್ತ ವೈಯಾಲಿಕಾವಲ್​ ಪೊಲೀಸ್​ ಠಾಣೆಯಲ್ಲಿ ತನಗೆ ಜಾಮೀನು ಸಿಗುತ್ತದೆಯೋ ಇಲ್ಲವೋ, ಈ ಹಿಂದಿನ ಪ್ರಕರಣಗಳೆಲ್ಲಾ ದಾಖಲಿಸಿ ಪೊಲೀಸರು ರೌಡಿ ಶೀಟರ್​ ಪಟ್ಟಿ ತೆರೆದರೆ ಎಂಬ ಆತಂಕದಲ್ಲಿದ್ದಾರೆ. ಅತ್ತ ಹೆಂಡತಿಯರಿಬ್ಬರು ಜಗಳವಾಡಿಕೊಂಡು ಪೊಲೀಸ್​ ಮೆಟ್ಟಿಲೇರಿರುವುದು ಮತ್ತೊಂದು ಆತಂಕ ಸೃಷ್ಟಿಸಿದೆ.

Comments are closed.