ಬೆಂಗಳೂರು: ಕಾರು ಅಪಘಾತದಿಂದ ಗಾಯಗೊಂಡಿರುವ ದರ್ಶನ್ ಬೇಗನೇ ಗುಣಮುಖನಾಗಿ ಬನ್ನಿ ಎಂದು ಕಿಚ್ಚ ಸುದೀಪ್ ಹಾರೈಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸುದೀಪ್, ನೀವು ಚೆನ್ನಾಗಿದ್ದೀರಿ ಎನ್ನುವುದು ನನಗೆ ತಿಳಿಯಿತು. ಶೀಘ್ರವೇ ಗುಣಮುಖರಾಗಿ ಎಂದು ನಾನು ಹಾರೈಸುತ್ತೇನೆ. ಗೆಟ್ ವೆಲ್ ಸೂನ್ ಮೈ ಫ್ರೆಂಡ್ ಎಂದು ಬರೆದುಕೊಂಡಿದ್ದಾರೆ.
ಸುದೀಪ್ ಸೋಮವಾರ ಸಂಜೆ 7.13ಕ್ಕೆ ಟ್ವೀಟ್ ಮಾಡಿದ್ದು ಒಂದು ಗಂಟೆ ಆಗುವಷ್ಟರಲ್ಲೇ ಈ ಟ್ವೀಟ್ ಅನ್ನು 2 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದು, 600ಕ್ಕೂ ಹೆಚ್ಚು ಮಂದಿ ರೀ ಟ್ವೀಟ್ ಮಾಡಿದ್ದಾರೆ.
ದರ್ಶನ್ ಮನವಿಯೇನು?:
`ಎಲ್ಲರಿಗೂ ನಮಸ್ಕಾರಪ್ಪ. ನನ್ನ ಅನ್ನದಾತರು, ಅಭಿಮಾನಿಗಳಲ್ಲಿ ನನ್ನದೊಂದು ರಿಕ್ವೆಸ್ಟ್. ದಯವಿಟ್ಟು ನನಗೆ ಏನೂ ಆಗಿಲ್ಲ. ಆರಾಮಾಗಿರಿ. ಇನ್ನು ಒಂದು ದಿನ ಆಸ್ಪತ್ರೆಯಲ್ಲಿದ್ದು, ನಾಳೆ ಬರುತ್ತೇನೆ. ಆ ಬಳಿಕ ಎಲ್ಲರಿಗೂ ಸಿಗುತ್ತೇನೆ. ಹೀಗಾಗಿ ದಯವಿಟ್ಟು ಯಾರೂ ಆಸ್ಪತ್ರೆಯತ್ತ ಬರಬೇಡಿ. ಇದೊಂದು ನನ್ನ ಮನವಿ ಅಂತಾನೇ ತಿಳಿದುಕೊಳ್ಳಿ. ಯಾಕಂದ್ರೆ ಬೇರೆ ರೋಗಿಗಳು ಆಸ್ಪತ್ರೆಯಲ್ಲಿದ್ದಾರೆ. ಹೀಗಾಗಿ ಅವರಿಗೆ ತೊಂದರೆಯಾಗುತ್ತದೆ ಎಂಬುದು ನನ್ನ ಭಾವನೆ. ಒಟ್ಟಿನಲ್ಲಿ ಎಲ್ಲರೂ ಆರಾಮಾಗಿರಿ. ನಿಮ್ಮ ದರ್ಶನ್ ಗೆ ಏನೂ ಆಗಿಲ್ಲ. ಧನ್ಯವಾದ ಅಂತ ದರ್ಶನ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
Comments are closed.