ಮನೋರಂಜನೆ

ತನ್ನ ಸ್ತನಗಳ ದಾನ ಘೋಷಣೆ ಮಾಡಿದ ರಾಖಿ ಸಾವಂತ್ !

Pinterest LinkedIn Tumblr


ನವದೆಹಲಿ: ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಾಗುವ ಬಾಲಿವುಡ್ ಹಾಟ್ ಬೆಡಗಿ ರಾಖಿ ಸಾವಂತ್ ಇದೀಗ ಎಲ್ಲರ ಹುಬ್ಬೇರಿಸುವಂತಹ ಹೇಳಿಕೆ ನೀಡಿದ್ದಾರೆ..

ಹೌದು ಬಾಲಿವುಡ್ ನ ಮಾದಕ ನಟಿ ರಾಖಿ ಸಾವಂತ್..ತನ್ನ ಸ್ತನವನ್ನು ದಾನ ಮಾಡುವ ಬಯಕೆ ಹೊಂದಿರುವುದಾಗಿ ಘೋಷಣೆ ಮಾಡಿದ್ದಾಳೆ! ಹೌದು ಆಕೆಯ ಘೋಷಣೆ ಏನು, ಹೇಳಿದ್ದೇನು ಎಂಬ ಬಗ್ಗೆ ಮುಂದೆ ಓದಿ…

ಬಾಲಿವುಡ್ ನ ನೀಲಿ ಕಂಗಳ ಚೆಲುವೆ ಐಶ್ವರ್ಯ ಬಚ್ಚನ್ ಅವರು ಕೆಲ ವರ್ಷಗಳ ಹಿಂದೆ ಭಾರತೀಯ ನೇತ್ರ ಬ್ಯಾಂಕ್ ಸಂಘಕ್ಕೆ ಕಣ್ಣು ದಾನ ಮಾಡುವುದಾಗಿ ಘೋಷಿಸಿದ್ದರು. ಐಶ್ವರ್ಯ ಅವರ ಈ ನಿರ್ಧಾರಕ್ಕೆ ರಾಖಿ ಅಭಿನಂದನೆ ಸಲ್ಲಿಸಿದ್ದಾರೆ.

ಜನರು ತಮ್ಮ ಅಂಗಾಂಗಳನ್ನು ದಾನ ಮಾಡುವ ಮೂಲಕ ಮಹತ್ತರವಾದ ಕಾರ್ಯ ಮಾಡುತ್ತಿದ್ದಾರೆ. ಹೀಗಾಗಿ ನಟಿಯಾದ ನಾನು ಕೂಡಾ ಯಾಕೆ ಈ ನಿರ್ಧಾರ ಅನುಸರಿಸಬಾರದು..ಹೀಗಾಗಿ ತನ್ನ ಸ್ತನವನ್ನು ಡೋನೇಟ್ ಮಾಡಲು ನಿರ್ಧರಿಸಿರುವುದಾಗಿ ಹೇಳುವ ರಾಖಿ ವಿಡಿಯೋ ವೈರಲ್ ಆಗಿದೆ.

ಇನ್ಸ್ ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ಈಗಾಗಲೇ 10 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ರಾಖಿಯ ಈ ಹೇಳಿಕೆಯಿಂದಾಗಿ ಟ್ರೋಲ್ ಗೆ ಒಳಗಾಗಿದ್ದಾಳೆ.

ನಿಮಗೆ ಬಹುತೇಕ ಗೊತ್ತಿರಲಿಕ್ಕಿಲ್ಲ. ಆದರೆ ಮಹಿಳೆಯರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಾರೆ. ಆ ಅಂಗವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಗುತ್ತದೆ. ಹೀಗಾಗಿ ನಾನು ಆಲೋಚಿಸಿದೆ..ನಾನ್ಯಾಕೆ ನನ್ನ ಸ್ತನವನ್ನು ದಾನವಾಗಿ ನೀಡಬಾರದು? ಎಂದು ಹೇಳಿಕೊಂಡಿದ್ದಾಳೆ!

Comments are closed.