ಮುಂಬೈ: ಬಾಲಿವುಡ್ ಸ್ಪುರದ್ರೂಪಿ ನಟ ರಣ್‍ವೀರ್ ಸಿಂಗ್ ಅವರು ತಮ್ಮ ಡಿಫೆರೆಂಟ್ ಲುಕ್, ಡ್ರೆಸ್ಸಿಂಗ್ ಮೂಲಕವೇ ಗುರುತಿಸಿಕೊಳ್ಳುವ ಅವರು ಈಗ ಮತ್ತೊಮ್ಮೆ ಕಲರ್‍ಫುಲ್ ಬಟ್ಟೆ ಧರಿಸಿದ್ದು, ಫೋಟೋಗಳು ಎಲ್ಲಡೆ ಹರಿದಾಡುತ್ತಿವೆ.
ಮಂಗಳವಾರ ರಣ್‍ವೀರ್ ಖಾಸಗಿ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ರಣ್‍ವೀರ್ ಬರುತ್ತಿದ್ದಂತೆ ಕಾರ್ಯಕ್ರಮದಲ್ಲಿದ್ದ ಜನರು ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದಾರೆ. ಹಳದಿ, ನೀಲಿ ಮಿಶ್ರಿತ ಬಣ್ಣದ ಜಿಗ್ ಜ್ಯಾಗ್ ಡ್ರೆಸ್ ಧರಿಸಿದ್ದ ರಣ್‍ವೀರ್‍ನ್ನು ನೋಡಿದ ಅಭಿಮಾನಿಗಳು ನೀವು ಪ್ರತಿಬಾರಿಯೂ ಡಿಫೆರೆಂಟ್ ಎಂದು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ನಿರ್ಮಾಪಕ ರೋಹಿತ್ ಶೆಟ್ಟಿ ಸಹ ಹಾಜರಿದ್ದರು.
ಈ ಹಿಂದೆ ಕಾರ್ಯಕ್ರಮದಲ್ಲಿ ಸ್ಕರ್ಟ್ ರೀತಿಯ ಡ್ರೆಸ್ ಧರಿಸಿ ಬಂದಿದ್ದಕ್ಕೆ ಗೆಳತಿ ದೀಪಿಕಾ ಸಿಡಿಮಿಡಿಗೊಂಡಿದ್ದರು. ರಣ್‍ವೀರ್ ಫೋಟೋ ನೋಡಿದ ದೀಪಿಕಾ ‘ನೋ’ ಅಂತಾ ಬರೆದು ಕಣ್ಮುಚ್ಚಿ ಕುಳಿತಿರುವ ನಾಯಿ ಮರಿಗಳಿರುವ ಎಮೋಜಿ ಹಾಕಿದ್ದರು. ರೋಹಿತ್ ಶೆಟ್ಟಿ ನಿರ್ಮಾಣದ ಸಿಂಬಾ ಚಿತ್ರದಲ್ಲಿ ರಣ್‍ವೀರ್ ನಟಿಸುತ್ತಿದ್ದಾರೆ. ಚಿತ್ರದಲ್ಲಿ ರಣ್‍ವೀರ್ ಜೊತೆಯಾಗಿ ಸಾರಾ ಅಲಿಖಾನ್ ನಟಿಸುತ್ತಿದ್ದಾರೆ. ಚಿತ್ರ ಡಿಸೆಂಬರ್ 28ರಂದು ತೆರೆಕಾಣಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
Comments are closed.