ಮನೋರಂಜನೆ

ತನುಶ್ರೀ ದತ್ತ್ ನಂತರ ನಾನಾ ಪಾಟೇಕರ್​ ಲೈಂಗಿಕ ಕಿರುಕುಳದ ಕುರಿತು ಮಾತನಾಡಿದ ನಟಿ ಡಿಂಪಲ್​ ಕಪಾಡಿಯಾ

Pinterest LinkedIn Tumblr


ಮುಂಬೈ: ನಟಿ ತನುಶ್ರೀ ದತ್​ ಅವರು ನಟ ನಾನಾ ಪಾಟೇಕರ್​ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದಾಗಿನಿಂದಲೂ ಬಾಲಿವುಡ್​ನಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಅನೇಕ ಸೆಲಿಬ್ರೆಟಿಗಳು ತನುಶ್ರೀ ಪರ ಬ್ಯಾಟ್​ ಬೀಸಿದರೆ, ಕೆಲವರು ತುಟಿ ಬಿಚ್ಚದೇ ನಮಗ್ಯಾಕೆ ಬೇಕು ಅಂತ ಸುಮ್ಮನಾಗಿದ್ದಾರೆ. ಆದರೆ, ಈ ಮಧ್ಯೆ ನಾನಾ ಪಾಟೇಕರ್​ ಕುರಿತಾದ ಹಳೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಬಹು ವರ್ಷಗಳ ಹಿಂದೆ ಹಿರಿಯ ನಟಿ ಡಿಂಪಲ್​ ಕಪಾಡಿಯಾ ಅವರು ನಾನಾ ಪಾಟೇಕರ್​ ಕುರಿತಾಗಿ ಮಾತನಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಉಂಟುಮಾಡಿದೆ. ನಾನಾ ಪಾಟೇಕರ್ ಅವರು​ ಸೌಮ್ಯ ಸ್ವಭಾವದವರಾದರೆ, ಅವರ ದಾರಿಗೆ ಅವರು ಹೆಚ್ಚು ಅಂಟಿಕೊಂಡಿರುತ್ತಾರಾ ಎಂದು ಸಂದರ್ಶನವೊಂದರಲ್ಲಿ ಸಿನಿಮಾ ವಿಮರ್ಶಕಿ ಅನುಪಮ ಛೋಪ್ರಾ ಕೇಳಿದ ಪ್ರಶ್ನೆಗೆ ಕಪಾಡಿಯಾ ಉತ್ತರಿಸುತ್ತಾ ಆತ ಹೇಸಿಗೆ ಹುಟ್ಟಿಸುಂತಹ ವ್ಯಕ್ತಿಯೆಂದು ನನಗನಿಸುತ್ತದೆ ಎಂದಿದ್ದಾರೆ. ಒಳ್ಳೆಯ ಅಥವಾ ಕೆಟ್ಟ ಅರ್ಥದಲ್ಲಿ ನೀವಿದನ್ನು ಹೇಳುತ್ತಿದ್ದೀರ ಎಂದು ಕೇಳಿದ್ದಕ್ಕೆ ಸ್ವಲ್ಪ ಹಿಂಜರಿದ ಅವರು ಎರಡು ಅರ್ಥದಲ್ಲಿ ಹೇಳಿದ್ದೇನೆ ಎಂದಿದ್ದಾರೆ.

ಅತ್ಯುತ್ತಮ ನಟನಾಗಿರುವ ಪಾಟೇಕರ್​ ಅವರು ಡಾರ್ಕ್​ ಸೈಡ್​ ಅನ್ನು ಹೊಂದಿದ್ದಾರೆ. ಅದು ಎಲ್ಲರಿಗೂ ತಿಳಿದಿರುವ ಸತ್ಯ. ಪ್ರತಿಭೆ ವಿಚಾರಕ್ಕೆ ಬಂದರೆ ಆತನಿಗೆ ಸರಿಸಾಟಿ ಯಾರು ಇಲ್ಲ. ಆತ ಅತ್ಯಂತ ಪ್ರತಿಭಾವಂತ ಎಂದು ಶ್ಲಾಘಿಸಿದ್ದಾರೆ. ಓರ್ವ ವ್ಯಕ್ತಿಯಾಗಿ ತುಂಬಾ ಒಳ್ಳೆಯ, ದಯೆಯುಳ್ಳ ಹಾಗೂ ಉತ್ತಮ ಸ್ನೇಹಿತನಾಗಿದ್ದ ಆತನನ್ನು ಭಯಾನಕ ಕಡೆಯಿಂದಲೂ ನೋಡಿದ್ದೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಪಾಡಿಯಾ ಅವರು ಪಾಟೇಕರ್​ ಜತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂಗಾರ್​, ಪ್ರಹಾರ್​, ಕ್ರಾಂತಿವೀರ್​, ತುಮ್​ ಮಿಲೋ ತೊಹ ಸಹಿ ಮತ್ತು ವೆಲ್​ಕಮ್​ ಬ್ಯಾಕ್​ ಮುಂತಾದ ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ.

Nana Patekar’s “dark side” has always been an open secret in Bollywood.

Dimple Kapadia said this 8 years ago. pic.twitter.com/9hbd0WmcZo

— Od (@odshek) September 28, 2018

Comments are closed.