ಮನೋರಂಜನೆ

ಕೀರ್ತಿಗೌಡಗೆ ಎಷ್ಟು ಜನ ಬಾಯ್ ಫ್ರೆಂಡ್ಸ್ ಇದ್ದಾರೆ ಎಂಬ ಕುರಿತು ನನ್ನ ಹತ್ತಿರ ದಾಖಲೆಗಳಿವೆ: ನಾಗರತ್ನ

Pinterest LinkedIn Tumblr


ಬೆಂಗಳೂರು: ಸ್ಯಾಂಡಲ್ವುಡ್ ನ ಕರಿ ಚಿರತೆ ಖ್ಯಾತಿಯ ದುನಿಯಾ ವಿಜಯ್ ಪತ್ನಿಯರ ನಡುವಿನ ಬೀದಿ ಕಾಳಗ ಸದ್ಯಕ್ಕೆ ನಿಲ್ಲುವ ಸೂಚನೆಗಳು ಕಾಣುತ್ತಿಲ್ಲ.
ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಇಂದು ಸುದ್ದಿಗೋಷ್ಠಿ ನಡೆಸಿ ದುನಿಯಾ ವಿಜಿ ತಾವು ಮೊದುವೆಯಾಗಿರುವುದಾಗಿ ಹೇಳುತ್ತಿರುವ ಕೀರ್ತಿಗೌಡ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.
ಕೀರ್ತಿಗೌಡ ಅವರಿಗೆ ಎಷ್ಟು ಜನ ಬಾಯ್ ಫ್ರೆಂಡ್ಸ್ ಇದ್ದಾರೆ. ಅವಳು ಯಾವ ನಿರ್ಮಾಪಕರ ಜೊತೆ ಮಲಗಿದ್ದಾಳೆ ಎಂಬುದರ ಕುರಿತು ನನ್ನ ಬಳಿ ದಾಖಲೆಗಳಿವೆ. ಕೀರ್ತಿಗೌಡ ಅನೈತಿಕ ಸಂಬಂಧಗಳ ಬಗ್ಗೆ ನನ್ನ ಬಳಿ ದಾಖಲೆಗಳಿದ್ದು ಅವುಗಳನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದರು.
ನನ್ನ ಮಕ್ಕಳಿಗೊಸ್ಕರ ನಾನು ಎಲ್ಲವನ್ನು ಸಹಿಸಿಕೊಂಡು ಇಷ್ಟು ದಿನ ನಾನು ಮೌನವಾಗಿದ್ದೆ. ನನ್ನ ಮಕ್ಕಳ ಭವಿಷ್ಯ ನನಗೆ ಮುಖ್ಯ. ನಮ್ಮ ಸಂಸಾರದ ವಿಷಯ ಬೀದಿಗೆ ಬರಲು ಕೀರ್ತಿಗೌಡ ಕಾರಣ. ನಾನು ವಿಜಿಗೆ ವಿಚ್ಛೇದನ ನೀಡಿದ್ದೇನೆ ಎಂದು ಹೇಳುತ್ತಿದ್ದಾರೆ. ನಾನು ವಿಚ್ಛೇದನ ನೀಡಿರುವ ಕುರಿತು ಅವಳು ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಆಸ್ತಿ, ಪಾಸ್ತಿಗೋಸ್ಕರ ನಾನು ದುನಿಯಾ ವಿಜಯ್ ಹಿಂದೆ ಬಿದ್ದಿರುವುದಾಗಿ ಹೇಳುತ್ತಿದ್ದಾರೆ. ಯಾರು ದುಡ್ಡಿಗಾಗಿ ವಿಜಿ ಹಿಂದೆ ಬಿದ್ದಿದ್ದಾರೆ ಅಂತ ನನ್ನ ಗಂಡ ವಿಜಿಗೆ ತಿಳಿಯುತ್ತದೆ. ಆಗ ಅವರೇ ತಾನಾಗಿ ನನ್ನ ಬಳಿಗೆ ಬರುತ್ತಾರೆ ಅನ್ನುವ ನಂಬಿಕೆ ನನಗಿದೆ ಎಂದು ಹೇಳಿದರು.

Comments are closed.