ಮನೋರಂಜನೆ

ನಿರ್ದೇಶಕ ವಿಕಾಸ್ ಬಹ್ಲ್ ವಿರುದ್ಧ ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ; ನಟಿ ಕಂಗನಾ ಹೇಳಿದ್ದೇನು..?

Pinterest LinkedIn Tumblr

ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಲೈಂಗಿಕ ಕಿರುಕುಳ ಆರೋಪ ಮಾಡಿದ ನಂತರ ಕ್ವೀನ್ ನಿರ್ದೇಶಕ ವಿಕಾಸ್ ಬಹ್ಲ್ ಕೂಡಾ ಅನೇಕ ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಅಂತಹ ನಟಿಯರಿಗೆ ತಾನೂ ಬೆಂಬಲ ನೀಡಿರುವುದಾಗಿ ಕ್ವೀನ್ ಚಿತ್ರದ ನಟಿ ಕಂಗನಾ ರಾನೌತ್ ಹೇಳಿದ್ದಾರೆ.

ಹೆಸರು ಹೇಳಲು ಇಚ್ಚಿಸದ ನಟಿಯೊಬ್ಬರು ಮಿಸ್ ಮಾಲಿನಿ ಸುದ್ದಿಸಂಸ್ಥೆ ಜೊತೆಗೆ ಮಾತನಾಡುತ್ತ, ವಿಕಾಸ್ ಉಪಾಯದಿಂದ ಬುಟ್ಟಿಗೆ ಹಾಕಿಕೊಳ್ಳುವ ಮನುಷ್ಯ ,ಅವನೊಂದಿಗೆ ಒಬ್ಬರೇ ಹೋಗುವುದು ಒಳಿತಲ್ಲ ಎಂಬುದನ್ನು ನಾನು ಯಾವಾಗಲೂ ಅರಿತಿದ್ದೆ. ಆದಾಗ್ಯೂ, 20 ಮಂದಿಯೊಂದಿಗೂ ಪಾರ್ಟಿಗೆ ಹೋಗಿದ್ದಾಗ. 47 ವರ್ಷದ ವಿಕಾಸ್ ಕಂಠಪೂರ್ತಿ ಕುಡಿದು, ತನ್ನ ತುಟಿಗೆ ಬಲವಂತವಾಗಿ ಚುಂಬಿಸಲು ಪ್ರಯತ್ನಿಸಿದ್ದರು. ಆಗ ಆತನನ್ನು ತಳ್ಳಿ , ಕೂಡಲೇ ಆ ಪಾರ್ಟಿಯಿಂದ ಹೊರಬಂದಿದ್ದಾಗಿ ಹೇಳಿದ್ದಾರೆ.

ಆ ನಟಿಯ ಪರ ಮಾತನಾಡುವ ಕಂಗನಾ, ಆಕೆಯನ್ನು ನಾನು ಸಂಪೂರ್ಣವಾಗಿ ನಂಬುತ್ತೇನೆ, ವಿಕಾಸ್ ಬಹ್ಲ್ 2014ರ ಹಿಂದೆಯೇ ವಿವಾಹವಾಗಿದ್ದರೂ ಕ್ವೀನ್ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಪ್ರತಿಯೊಂದು ದಿನವೊ ಹೊಸ ಪಾರ್ಟನರ್ ಜೊತೆಗೆ ಲೈಂಗಿಕತೆ ಹೊಂದುತ್ತಿದ್ದರು. ವಿವಾಹದ ಬಗ್ಗೆ ನಾನೇನೂ ಹೇಳುವುದಿಲ್ಲ. ಆದರೆ. ವ್ಯಸನವೇ ಅನಾರೋಗ್ಯವಾದರೆ ಏನು ಹೇಳುತ್ತೀರಾ ಎಂದು ಕೇಳಿದ್ದಾರೆ.

ಕ್ಲೀನ್ ಚಿತ್ರದ ಚಿತ್ರೀಕರಣ ವೇಳೆಯಲ್ಲಿ ವಿಕಾಸ್ ಬಹ್ಲ್ ಜೊತೆ ಆದ ಅನುಭವಗಳನ್ನು ಕಂಗನಾ ರಾನೌತ್ ಹಂಚಿಕೊಂಡಿದ್ದಾರೆ. ಇಡೀ ರಾತ್ರಿ ಪಾರ್ಟಿ ಮಾಡುತ್ತಿದ್ದರಿಂದ ಬೇಗ ಮಲಗಲು ಆಗುತ್ತಿರಲಿಲ್ಲ ಹಾಗೂ ಶಾಂತವಾಗಿ ಇರಲು ಆಗುತ್ತಿರಲಿಲ್ಲ. ಹಲವಾರು ಸಂದರ್ಭಗಳಲ್ಲಿ ವಿಕಾಸ್ ನನ್ನೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ. ಅವರು ನನ್ನನ್ನು ಬಿಗಿದಪ್ಪಿ, ನನ್ನ ಕೇಶರಾಶಿಯ ಪರಿಮಳವನ್ನು ಆಘ್ರಾಣಿಸಿದ್ಧಾರೆ ವಿಕಾಸ್ ಮುಜುಗರದ ನಡೆಯಿಂದ ತಪ್ಪಿಸಿಕೊಂಡು ಹೊರಬರಲು ನನಗೆ ಹೆಚ್ಚಿನ ಶಕ್ತಿ ಮತ್ತು ಪ್ರಯತ್ನ ಪಡಬೇಕಾಗಿತ್ತು ಎಂದು ಎಂದು ಕಂಗನಾ ಆರೋಪಿಸಿದ್ದಾರೆ.

ವಿಕಾಸ್ ಬಹ್ಲ್ ನಿಂದ ಅನ್ಯಾಯಕ್ಕೊಳಗಾದ ಯುವತಿಯರಿಗೆ ನೆರವು ನಿಟ್ಟಿನಲ್ಲಿ ಕೆಲ ಚಿತ್ರಗಳನ್ನು ಕಳೆದುಕೊಳ್ಳಬೇಕಾಯಿತು ಎಂದು ಕಂಗನಾ ಹೇಳಿದ್ದಾರೆ. ಶಕ್ತಿ ಇಲ್ಲದ ಪುರುಷರು ಅಭಿಮಾನ ಆರಂಭಿಸುವುದಿಲ್ಲ ಎಂದು ಅವರು ದಾಳಿ ನಡೆಸಿದ್ದು, ನಾವು ಇದನ್ನ ಮಾಡಬೇಕು ಅಥವಾ ಮಾಡದೆ ಇರಬಹುದು. ಸಮಾಜದಲ್ಲಿ ಸುಮ್ಮನೆ ಕುಳಿತಿದ್ದರೆ ಏನೂ ಮಾಡಲು ಆಗುವುದಿಲ್ಲ. ಪ್ರಾಮಾಣಿಕತೆಯಿಂದ ಆತ್ಮಸ್ಱೈರ್ಯದಿಂದ ಮುನ್ನುಗಬೇಕು.

ಆಯ್ದ ಆಕ್ರೋಶ ಮಾತ್ರ ಮನರಂಜನೆಯಾಗಿ ಕಾರ್ಯನಿರ್ವಹಿಸುತ್ತದೆ, ಇದು ಕೇವಲ ಟ್ಯಾಬ್ಲಾಯ್ಡ್ ಗಾಸಿಪ್ ಮತ್ತು ಮತ್ತೇನಲ್ಲ ಎಂದು ಕಂಗನಾ ಹೇಳಿದ್ದಾರೆ.

Comments are closed.