ಮನೋರಂಜನೆ

ಹಿರಿಯ ಕಥೆಗಾರ್ತಿ- ನಿರ್ಮಾಪಕಿ ವಿಂತಾ ನಂದಾ ಮೇಲೆ ಅತ್ಯಾಚಾರ ಮಾಡಿಲ್ಲ: ಬಾಲಿವುಡ್ ನಟ ಅಲೋಕ್ ನಾಥ್

Pinterest LinkedIn Tumblr


ಹಿರಿಯ ಕಥೆಗಾರ್ತಿ- ನಿರ್ಮಾಪಕಿ ವಿಂತಾ ನಂದಾ ಮಿ ಟೂ ಅಭಿಯಾನದಲ್ಲಿ ಮಾಡಿರುವ ಅತ್ಯಾಚಾರ ಆರೋಪವನ್ನು ಬಾಲಿವುಡ್ ನಟ ಅಲೋಕ್ ನಾಥ್ ನಿರಾಕರಿಸಿದ್ದಾರೆ.
ತಮ್ಮ ಮೇಲಿನ ಆರೋಪಕ್ಕೆ ಕುರಿತಂತೆ ಪ್ರತಿಕ್ರಿಯಿಸಿರುವ ಅಲೋಕ್ ನಾಥ್, ಅತ್ಯಾಚಾರ ನಡೆದಿರಬಹುದು ಆದರೆ, ಬೇರೆ ಯಾರೊ ಮಾಡಿರುತ್ತಾರೆ. ಇದರ ಬಗ್ಗೆ ನಾನೂ ಹೆಚ್ಚಿಗೆ ಮಾತನಾಡುವುದಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಈ ಮಧ್ಯೆ ಅತ್ಯಾಚಾರ ಮಾಡಿರುವುದನ್ನು ಒಪ್ಪಿಕೊಳ್ಳಲಾಗದೂ ಅಥವಾ ಒಪ್ಪದೆ ಇರಲಾದರು ಎಂದು ಸಹ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.
ಈ ಅಭಿಯಾನದಲ್ಲಿ ಹಲವು ಮಂದಿ ತಮ್ಮ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳನ್ನು ಬಹಿರಂಗಪಡಿಸುತ್ತಿದ್ದಾರೆ.ಈ ಅಭಿಯಾನದ ಬಗ್ಗೆ ತಮ್ಮಗೆ ಅರಿವಿದೆ. ಆದಾಗ್ಯೂ,ಅವರನ್ನು ದುರ್ಬಲರೆಂದು ಪರಿಗಣಿಸುವ ಕಾರಣ ಮಹಿಳೆಯರ ನಿಲುವನ್ನು ಕೇಳಬೇಕಾಗಿದೆ ಎಂದು ಹೇಳಿದ್ದಾರೆ.
ವಿಂತಾ ನಂದಾ ಆರೋಪದ ನಂತರ ಜನರು ತಮ್ಮ ವರ್ಚಸ್ಸಿಗೆ ಧಕ್ಕೆ ತರುವಂತಹ ಮಾತುಗಳನ್ನಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅಲೋಕ್ ನಾಥ್, ಒಂದು ಕಾಲದಲ್ಲಿ ಉತ್ತಮ ಸ್ನೇಹಿತೆಯಾಗಿದ್ದ ವಿಂತಾ ನಂದಾ ಈಗ ಮಾಡುತ್ತಿರುವ ಆರೋಪ ದೊಡ್ಡ ವಿಚಾರವಾಗಿದೆ. ವಿಂತಾ ನಂದಾ ಏನು, ಯಾರು ಎಂಬಂತಹ ಅಂಶಗಳು ಸೇರಿದಂತೆ ಈ ವಿವಾದ ಶೀಘ್ರದಲ್ಲಿಯೇ ಅಂತ್ಯವಾಗಲಿದೆ. ತಪ್ಪಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Comments are closed.