ಮನೋರಂಜನೆ

ಕಪೂರ್​ ಕುಟುಂಬದ ಸೊಸೆಯಾಗಲಿರುವ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ?

Pinterest LinkedIn Tumblr


ಪರಿಣಿತಿ ಚೋಪ್ರಾ ಹಾಗೂ ನಟ ಅರ್ಜುನ್​ ಕಪೂರ್​ ಯಶ್​ ರಾಜ್​ ಫಿಲ್ಮ್ಸ್​ನಲ್ಲಿ ನಾಯಕ-ನಾಯಕಿಯಾಗಿ ಬಿ-ಟೌನ್​ಗೆ ಪರಿಚಿತರಾದವರು. 2012 ರಲ್ಲಿ ತೆರೆ ಕಂಡ ‘ಇಷಕ್​ಜಾದೆ’ ಸಿನಿಮಾದಲ್ಲಿ ಇವರಿಬ್ಬರ ಕೆಮಿಷ್ಟ್ರಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ಈಗ ಈ ಜೋಡಿ ಮತ್ತೆ ‘ನಮಸ್ತೆ ಇಂಗ್ಲೆಂಡ್​’ ಸಿನಿಮಾಗಾಗಿ ಒಂದಾಗಿದ್ದು, ಕಳೆದ ಗುರುವಾರ ಈ ಚಿತ್ರ ತೆರೆ ಕಂಡಿದೆ.

ಪರಿಣಿತಿ -ಅರ್ಜುನ್​ ಕಪೂರ್​ ಅಭಿಮಾನಿಗಳು ಮಾತ್ರವಲ್ಲದೆ, ಇವರ ಮನೆಯವರೂ ಸಹ ಈ ಜೋಡಿಯ ಕೆಮಿಸ್ಟ್ರಿಯನ್ನು ತೆರೆ ಮೇಲೆ ನೋಡಲು ಇಷ್ಟಪಡುತ್ತಾರೆ. ಹೌದು ಅರ್ಜುನ್​ ಕಪೂರ್​ ಅವರ ಅಜ್ಜಿ ನಿರ್ಮಲ್​ ಕಪೂರ್​ ಅವರಿಗೂ ಅರ್ಜುನ್​ ಹಾಗೂ ಪರಿಣಿತಿಯ ಆನ್​ಸ್ಕ್ರೀನ್​ ಕೆಮಿಸ್ಟ್ರಿ ನೋಡಲು ತುಂಬಾ ಇಷ್ಟವಂತೆ. ‘ನಮಸ್ತೆ ಇಂಗ್ಲೆಂಡ್​’ ಟ್ರೈಲರ್​ ನೋಡಿದ ನಿರ್ಮಲ್​ ಅವರೇ ಅರ್ಜುನ್​ಗೆ ಹೇಳಿದ್ದಾರಂತೆ. ಹೀಗೆಂದು ಖುದ್ದು ಅರ್ಜುನ್​ ಕಳೆದ ವಾರ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಅಷ್ಟೆ ಅಲ್ಲದೆ ಪರಿಣಿತಿ, ಅರ್ಜುನ್​ಗೆ ಹೇಳಿ ಮಾಡಿಸಿದ ಜೋಡಿ ಎಂದೂ ಹೇಳಿದ್ದಾರಂತೆ.

‘ತೆರೆ ಮೇಲೆ ನಮ್ಮಿಬ್ಬರ ಜೋಡಿ ನೋಡಲು ಚೆನ್ನಾಗಿರುತ್ತೆ ಅಂತ ಅರ್ಜುನ್​ ಅವರ ಅಜ್ಜಿ ಹೇಳಿರೋದು ನಿಜಕ್ಕೂ ಖುಷಿ ನೀಡಿದೆ. ನಮ್ಮಿಬ್ಬರ ಸ್ನೇಹ ಸಹ ಅಷ್ಟೇ ಗಟ್ಟಿಯಾಗಿದೆ. ತೆರೆ ಹಿಂದೆಯೂ ನಾವಿಬ್ಬರು ಒಳ್ಳೆಯ ಸ್ನೇಹಿತರು. ಈ ಸಿನಿ ರಂಗದಲ್ಲಿ ನಿಜವಾದ ಸ್ನೇಹಿತರು ಸಿಗುವುದು ಕಷ್ಟ’ ಎಂದು ಪರಿಣಿತಿ ಹೇಳಿದ್ದಾರೆ.

Comments are closed.