ಮನೋರಂಜನೆ

ಬಿಗ್​ಬಾಸ್ ಮನೆ ಪ್ರವೇಶಿಸಿರುವ ಈ 18 ಮಂದಿ ಸ್ಪರ್ಧಿಗಳು ಯಾರು..?

Pinterest LinkedIn Tumblr

ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್ ಆರನೇ ಆವೃತ್ತಿಯಲ್ಲಿ ವಿವಿಧ ಕ್ಷೇತ್ರಗಳ 18 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ಬಸ್ ಕಂಡಕ್ಟರ್ ಆನಂದ್ ಮತ್ತು ಕೃಷಿಕ ಶಶಿ ಕುಮಾರ್ ಕೂಡಾ ಸ್ಪರ್ಧಾ ಕಣದಲ್ಲಿದ್ದು, ನಟ,ನಟಿಯರ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ಶಶಿಕುಮಾರ್ ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಜೊತೆಗೆ ಭೂಮಿಕ ನೃತ್ಯ ತಂಡದಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಕಿರುತೆರೆಯಲ್ಲಿ ಹೆಸರು ಮಾಡಿರುವ ಜಯಶ್ರೀ ರಾಜ್, ‘ಒಗ್ಗರಣೆ ಡಬ್ಬಿ’ ಮೂಲಕವೇ ಮನೆ ಮಾತಾದ ಮುರಳಿ, ‘ಪಲ್ಲಟ’ ಚಿತ್ರದಲ್ಲಿ ನಟಿಸಿದ ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ, ‘ಫಸ್ಟ್ ಲವ್’ ಚಿತ್ರದ ಮೂಲಕ ಚಂದನವನ ಪ್ರವೇಶಿಸಿರುವ ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ಕಿರುತೆರೆ ನಟಿ ಕವಿತಾ ಗೌಡ, ಪಟ್​ಪಟ್ ಅಂತ ಮಾತಿನಲ್ಲೇ ಮನೆಕಟ್ಟುವ ಆರ್​ಜೆ ರ್ಯಾಪಿಡ್ ರಶ್ಮಿ, ಹಿನ್ನೆಲೆ ಗಾಯಕ ನವೀನ್ ಸಜ್ಜು, ಈ ಹಿಂದೆ ಹಲವು ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿದ್ದ ನಯನಾ ಪುಟ್ಟಸ್ವಾಮಿ ಈ ಬಾರಿಯ ಬಿಗ್​ಬಾಸ್​ನಲ್ಲಿ ಸ್ಥಾನ ಪಡೆದಿದ್ದಾರೆ.

ಅದೇ ರೀತಿ, ಹಲವು ಸಿನಿಮಾಗಳಲ್ಲಿ ನಟಿಸಿ, ಇತ್ತೀಚೆಗಷ್ಟೇ ತಮಿಳು ರಿಯಾಲಿಟಿ ಶೋದಲ್ಲೂ ಭಾಗವಹಿಸಿದ್ದ, ಸೋನು ಪಾಟೀಲ್ ಬಿಗ್ ಮನೆ ಪ್ರವೇಶಿಸಿದ್ದಾರೆ. ಅವರೊಟ್ಟಿಗೆ ಆಂಡ್ಯ್ರೂ ಜಯಪಾಲ್, ಎಂ. ಜೆ. ರಾಕೇಶ್, ರಕ್ಷಿತಾ ರೈ, ಆಡಮ್ ಪಾಶಾ, ಎ. ವಿ. ರವಿ, ರೀಮಾ ದಿಯಾಸ್, ಸ್ನೇಹಾ ಆಚಾರ್ಯ, ಆನಂದ್, ಧನರಾಜ್ ಹೊಸ ಬಿಗ್​ಬಾಸ್ ಮನೆಗೆ ತೆರಳಿದ್ದಾರೆ. ಒಟ್ಟು ನೂರು ದಿನಗಳ ಕಾಲ ನಡೆಯುವ ಶೋನಲ್ಲಿ, ಹೊಸ ಬಗೆಯ ಟಾಸ್ಕ್​ಗಳನ್ನು ಸ್ಪರ್ಧಿಗಳಿಗೆ ನೀಡಿ, ಪ್ರೇಕ್ಷಕರನ್ನು ರಂಜಿಸುವ ಪ್ಲಾ್ಯನ್ ಬಿಗ್​ಬಾಸ್​ನದ್ದು. ಮನೆ ಒಳಾಂಗಣ ವಿನ್ಯಾಸವನ್ನೂ ಬದಲಾಯಿಸಲಾಗಿದ್ದು, ನೋಡುಗರಿಗೆ ಹೊಸತನ ಅನುಭವ ನೀಡುವ ಭರವಸೆಯೊಂದಿಗೆ ಕಲರ್​ಫುಲ್ ಚಾಲನೆ ನೀಡಲಾಗಿದೆ.

ನಟ ಸುದೀಪ್ ಸುದೀಪ್ ನಡೆಸಿಕೊಡಲಿರುವ ಬಿಗ್ ಬಾಸ್ 100 ದಿನಗಳ ಷೋ ಆಗಿದ್ದು, ವಿವಿಧ ಕನ್ನಡ ಸೆಲೆಬ್ರಿಟಿಗಳು ಅತಿಥಿಗಳಾಗಿ ಭಾಗವಹಿಸುತ್ತಾರೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 8 ಗಂಟೆಯಿಂದ 9 ಗಂಟೆಯವರೆಗೂ ಈ ಕಾರ್ಯಕ್ರಮ ಮೂಡಿಬರಲಿದ್ದು, ಭಾನುವಾರ ಮನೆಯಿಂದ ಒಬ್ಬರು ನಿರ್ಗಮಿಸುವ ಸುತ್ತು ಇರುತ್ತದೆ.

Comments are closed.