ಮನೋರಂಜನೆ

ದಿ ವಿಲನ್​ ವಿವಾದ: ಪ್ರೇಮ್​ ಕುರಿತು ರಕ್ಷಿತಾ ಬರೆದಿರುವ ಪತ್ರ

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಕಳೆದ ವಾರ ಬಿಡುಗಡೆಗೊಂಡ ಅತಿ ನಿರೀಕ್ಷಿತ ಪ್ರೇಮ್​ ನಿರ್ದೇಶನದ ‘ದಿ ವಿಲನ್​’ಗೆ ಪಾಸಿಟಿವ್​ ಹಾಗೂ ನೆಗಟಿವ್​ ಕಾಮೆಂಟ್​ಗಳು ಬರುತ್ತಲೇ ಇವೆ.

ಎಷ್ಟೋ ಟ್ರೋಲಿಗರು ಮನಸಿಗೆ ಬಂದಂತೆ ಟ್ರೋಲ್​ ಮಾಡುತ್ತಿದ್ದು , ಅವು ವೈರಲ್​ ಕೂಡ ಆಗ್ತಿವೆ. ಇವೆಲ್ಲವನ್ನೂ ನೋಡಿದ ನಿರ್ದೇಶಕ ಪ್ರೇಮ್​ ಪತ್ನಿ ರಕ್ಷಿತಾ ಇಂಥವರಿಗಾಗಿಯೇ ಮುಟ್ಟಿನೋಡಿಕೊಳ್ಳುವಂಥ ಪತ್ರವೊಂದನ್ನು ಬರೆದಿದ್ದಾರೆ.

ಹೌದು, ತಮ್ಮ ಅಧಿಕೃತ ಫೇಸ್​ಬುಕ್​ ವಾಲ್​ನಲ್ಲಿ, “ಕನ್ನಡದ ‘ವಿಲನ್’ ಸಿನಿಮಾ ಬಗ್ಗೆ, ಪ್ರೇಮ್ ಬಗ್ಗೆ , ಉರ್ಕೊಂಡು, ಸಿಲ್ಲಿಯಾಗಿ, ಪ್ರಶ್ನೆ, ಗೇಲಿ, ಟೀಕೆ, ವಿಮರ್ಶೆ, ಮಾಡ್ಕೊಂಡ್​ ಉರಿಯುವ ಗೆಳೆಯರಿಗೊಂದು ಅರಿಯುವ ಪತ್ರ…” ಎಂದು ಹೇಳುವ ಮೂಲಕ ಪತ್ರ ಆರಂಭಿಸಿರುವ ರಕ್ಷಿತಾ, ಚಿತ್ರರಂಗದಲ್ಲಿ ಪ್ರೇಮ್ ಯಾವುದೇ ಗಾಡ್ ಫಾದರ್ ಇಲ್ಲದೇ ಬೆಳೆದು ಬಂದಿದ್ದಾರೆ ಎಂಬುದನ್ನು ಉಲ್ಲೇಖಿಸಿದ್ದಾರೆ.

ಪ್ರೇಮ್ ಬಗ್ಗೆ, ವಿಲನ್ ಬಗ್ಗೆ, ಸಿಲ್ಲಿಯಾಗಿ ಮಾತಾಡೋ ಪ್ರತಿಭಾವಂತರು, ಪಂಡಿತರು, ಸಿನಿಮಾ ಮಾಡೋದ್ ಬೇಡಾ, ಒಂದು ಸಣ್ಣ ಟೆಲಿ ಫಿಲಂ ತೆಗೆದು ತೋರಿಸಲಿ ಆಗ ಅವರ ಪ್ರತಿಭೆ ಯೋಗ್ಯತೆಗಳು ಜನಕ್ಕೆ ಗೊತ್ತಾಗುತ್ತೆ. ಕೈಲಾಗದವರಿಗೆ, ದಿನಾ ಬೇರೆಯವರನ್ನ ಕಾಲೆಳೆಯೋದು, ಗೇಲಿ, ಟೀಕೆ, ಮಾಡುವುದೇ ಕುಲಕಸಬು. ಆದರೆ ನಿಮಗೆ ನಿರಂತರವಾಗಿ ಸಿನಿಮಾ ಮಾಡುವುದೇ ಕಸುಬು ಎಂದಿರುವ ರಕ್ಷಿತಾ ಕನ್ನಡದ ಪ್ರೇಕ್ಷಕ ಸದಾ ನಮ್ಮೊಂದಿಗೆ ಇರುತ್ತಾನೆ ಎಂದು ಬರೆದುಕೊಂಡಿದ್ದಾರೆ.

Comments are closed.