ಮನೋರಂಜನೆ

ಸಂಧಾನ ಸಾಧ್ಯವೇ ಇಲ್ಲ, ಕೋರ್ಟ್ ಗೆ ಹೋಗುತ್ತೇನೆ: ನಟ ಅರ್ಜುನ್ ಸರ್ಜಾ

Pinterest LinkedIn Tumblr


ಬೆಂಗಳೂರು: ಫಿಲ್ಮ್ ಚೇಂಬರ್ ಸದಸ್ಯರ ಮೇಲೆ ನಾನು ಕಳೆದ 35ರಿಂದ 38 ವರ್ಷಗಳಿಂದ ಅಪಾರ ಗೌರವವನ್ನು ಹೊಂದಿದ್ದೇನೆ. ಇಂದು ನನಗೆ ಕರೆದರು ಹಾಗಾಗಿ ಬಂದಿದ್ದೇನೆ. ನನಗೆ ನೋವು ಆಗಿದ್ದರೆ, ಸುಮ್ಮನಿರುತ್ತಿದ್ದೆ. ನನ್ನನ್ನು ನಂಬಿದವರು, ಕುಟುಂಬ ಸದಸ್ಯರು ಕೇರಳ, ತಮಿಳುನಾಡು, ಆಂಧ್ರ ಕರ್ನಾಟಕದ ಅಭಿಮಾನಿಗಳು ನೊಂದಿದ್ದಾರೆ. ಹಾಗಾಗಿ ನಾನು ನ್ಯಾಯಾಲಯದ ಮೊರೆ ಹೋಗುತ್ತಿದ್ದೇನೆ ಅಂತಾ ಅರ್ಜುನ್ ಸರ್ಜಾ ತಿಳಿಸಿದರು.

ನನ್ನ ತೇಜ್ಯೋವಧೆಗೆ ಕೆಲವರು ಪ್ರಯತ್ನಿಸುತ್ತಿದ್ದಾರೆ. ಅದು ಯಾರೆಂಬುವುದು ನಿಮಗೆಲ್ಲರಿಗೂ ತಿಳಿಯಲಿದೆ. ಪ್ರಕರಣ ನ್ಯಾಯಾಲಯದಲ್ಲಿ ಇದ್ದಿದ್ದರಿಂದ ಹೆಚ್ಚಾಗಿ ಮಾತನಾಡೋದಿಲ್ಲ. ಮಾಧ್ಯಮಗಳ ಮುಂದೆ ಪ್ರಕರಣದ ಕುರಿತು ಹೆಚ್ಚು ಮಾತನಾಡಬಾರದು ಹಿರಿಯರು ಹೇಳಿದ್ದಾರೆ. ಹಾಗಾಗಿ ನಾನು ಏನು ಹೇಳಲ್ಲ. ಸಂಧಾನ ಎಂಬುವುದೇ ಇಲ್ಲ ಎಂದು ಖಡಕ್ ಆಗಿ ಹೇಳಿದರು.

ಮೀಟೂ ಎಂಬುವುದು ದೊಡ್ಡ ವೇದಿಕೆ. ಅದನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿರೋದು ದುರಂತ. ನಾನು ಪ್ರಕರಣದಿಂದ ಹಿಂದೆ ಸರಿದ್ರೆ ಮುಂದಿನ ದಿನಗಳಲ್ಲಿ ಈ ರೀತಿಯ ದುರಪಯೋಗ ಹೆಚ್ಚಾಗಬಾರದು ಅಂತಾ ಪ್ರಕರಣದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿ ಸುದ್ದಿಗೋಷ್ಠಿಯಿಂದ ಹೊರ ನಡೆದ್ರು.

ಇದು ಕೂಡಲೇ ಬಗೆಹರಿಯುವಂತಹ ಪ್ರಕರಣ ಅಲ್ಲ. ಇಬ್ಬರ ಮನಸ್ಸಿಗೂ ನೋವಾಗಿದೆ. ಸಂಧಾನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸ್ವಲ್ಪ ಸಮಯವಕಾಶ ನೀಡಬೇಕಿದೆ. ಪ್ರಕರಣದ ಒಂದು ಹೆಜ್ಜೆ ಈಗಾಗಲೇ ನ್ಯಾಯಾಲಯದಲ್ಲಿದೆ. ಹಾಗಾಗಿ ತುಂಬಾ ಎಚ್ಚರಿಕೆಯಿಂದ ಎಲ್ಲವನ್ನು ನೋಡಬೇಕಿದೆ. ನಾನು ಹೇಳಿದ್ದು ಒಂದೇ ಮಾತು. ಶೇಖ್ ಹ್ಯಾಂಡ್ ಮಾಡಿ, ಒಬ್ಬರಿಗೊಬ್ಬರು ಮಾತನಾಡಿಸಬೇಡಿ. ಬೇರೆ ಬೇರೆಯಾಗಿ ಹೋಗಿ, ನಿಮ್ಮಿಬ್ಬರ ಮಧ್ಯೆ ನಾನು ಮಾತನಾಡುತ್ತೇನೆ ಎಂದು ರೆಬೆಲ್ ಸ್ಟಾರ್ ಅಂಬರೀಶ್ ಹೇಳಿದ್ದಾರೆ.

Comments are closed.