ಮನೋರಂಜನೆ

ಶೃತಿ ಹರಿಹರನ್ ಮೀಟೂ ವಿವಾದ: ಫಿಲ್ಮ್ ಚೇಂಬರ್ ಸಭೆಯಲ್ಲಿ ಏನು? ಏನಾಯ್ತು? ಇಲ್ಲಿದೆ ಪೂರ್ಣಪಾಠ

Pinterest LinkedIn Tumblr


ಬೆಂಗಳೂರು: ಕಳೆದ ಒಂದು ವಾರದಿಂದ ಸ್ಯಾಂಡಲ್‍ವುಡ್ ನಲ್ಲಿ ಮೀಟೂ ಆರೋಪ ಸಂಚಲನ ಮೂಡಿಸಿದೆ. ಶೃತಿ ಹರಿಹರನ್ ವಿಸ್ಮಯ ಚಿತ್ರದ ಚಿತ್ರೀಕರಣದ ವೇಳೆ ನಟ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಮೀಟೂ ವೇದಿಕೆಯಲ್ಲಿ ಹೇಳಿಕೊಂಡಿದ್ದರು. ಶೃತಿ ಆರೋಪ ಮಾಡುತ್ತಿದ್ದಂತೆ ಕೆಲ ಸಂಘಟನೆಗಳು, ನಟರು, ಕಲಾವಿದರು ನಟಿಯ ಪರ ನಿಂತರೆ, ಬಹುತೇಕ ಹಿರಿಯ ಕಲಾವಿದರು ಅರ್ಜುನ್ ಸರ್ಜಾ ಪರ ಬ್ಯಾಟ್ ಬೀಸಿದ್ದರು. ಇತ್ತ ಅರ್ಜುನ್ ಸರ್ಜಾ ವಿರುದ್ಧ ದೂರು ಕೇಳಿ ಬರುತ್ತಿದ್ದಂತೆ ಮಾವ, ಹಿರಿಯ ನಟ ಕಲಾ ತಪಸ್ವಿ ರಾಜೇಶ್ ಫಿಲ್ಮ್ ಚೇಂಬರ್ ನಲ್ಲಿ ದೂರು ದಾಖಲಿಸಿದ್ದರು.

ದೂರು ದಾಖಲಾದ ಬಳಿಕ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಚಲನಚಿತ್ರ ಮಂಡಳಿ ಸಹ ಶೃತಿ ಹರಿಹರನ್ ನೇರವಾಗಿ ಮಾಧ್ಯಮಗಳ ಮುಂದೆ ಹೋಗಬಾರದಿತ್ತು ಎಂದು ಅಸಮಾಧಾನ ಹೊರಹಾಕಿತ್ತು. ಆದ್ರೆ ರೆಬೆಲ್ ಸ್ಟಾರ್ ಅಂಬರೀಶ್ ಪ್ರವಾಸದಲ್ಲಿದ್ದರಿಂದ ಇಂದು ಸಂಧಾನ ಸಭೆಯನ್ನು ಮುಂದೂಡಿದ್ದರು. ಇಂದು ಸಂಜೆ ಫಿಲ್ಮ್ ಚೇಂಬರ್ ನಲ್ಲಿ ಶೃತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಮಧ್ಯೆ ಸಂಧಾನ ಸಭೆ ಅಂಬರೀಶ್ ನೇತೃತವದಲ್ಲಿ ನಡೆದಿದೆ. ಹಾಗಾದ್ರೆ ಸಭೆಯಲ್ಲಿ ಏನು? ಏನಾಯ್ತು? ಇಲ್ಲಿದೆ ಇನ್ ಸೈಡ್ ಸ್ಟೋರಿ

ಅಂಬರೀಶ್: ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಮಾತನಾಡಿ. ನಿಮಗೇ ನ್ಯಾಯ ಸಿಗುವ ಭರವಸೆ ನೀಡುತ್ತೇವೆ. ನಮ್ಮಿಂದ ಯಾರಿಗೂ ಅನ್ಯಾಯ ಆಗಿಲ್ಲ, ಗಂಡು ಹೆಣ್ಣು ಅಂತ ನೋಡಲ್ಲ. ಆದರೆ ನೀವು ಮಾಧ್ಯಮಗಳ ಮುಂದೇ ಹೋಗಿದ್ದು ತಪ್ಪು.

ಶೃತಿ: ಆ ವೇಳೆ ನನಗೆ ಆಗ ಏನು ಮಾಡಬೇಕು ಎಂದು ತಿಳಿಯಲಿಲ್ಲ. ಅದ್ದರಿಂದ ಹಾಗೆ ಮಾಡಿದೆ. ಈಗ ನಿಮ್ಮ ಮುಂದೇ ಬಂದಿದ್ದೇನೆ, ನ್ಯಾಯ ಸಿಗುವಂತೆ ಮಾಡಿ

ಅಂಬರೀಶ್: ಆದರೆ ಈ ಮಾತಿಗೆ ಸಮಾಧಾನ ವ್ಯಕ್ತಪಡಿಸಿದ ಅಂಬರೀಶ್ ಅವರು ನೀನು ಚಿಕ್ಕ ಹುಡುಗಿ ಅಲ್ಲ. ನಿಮ್ಮ ಈ ರೀತಿಯ ನಡೆಗಳಿಂದ ಇಡೀ ಚಿತ್ರರಂಗದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವು ಮೊದಲೇ ಇಲ್ಲಿಗೆ ಬಂದಿದ್ದರೆ ಇಷ್ಟು ಸಮಸ್ಯೆ ಆಗುತ್ತಿರಲಿಲ್ಲ. ಆದರೆ ನಿಮ್ಮ ಹಠವನ್ನು ಬಿಡುವುದು ಒಳ್ಳೆಯದು ಎಂದು ಸಲಹೆ ನೀಡದರು.

ಸರ್ಜಾ ತಿರುಗೇಟು: `ವಿಸ್ಮಯ’ ಕುರಿತು ಹೇಳಿಕೆ ನೀಡುವ ವೇಳೆ ಮಧ್ಯ ಪ್ರವೇಶ ಮಾಡಿದ ನಟ ಅರ್ಜುನ ಸರ್ಜಾ ಅವರು, ಸಿನಿಮಾ ವೇಳೆ ನಾನು ಯಾವುದೇ ರೀತಿ ಕೆಟ್ಟದಾಗಿ ವರ್ತನೆ ಮಾಡಿಲ್ಲ. ಅಲ್ಲದೇ ಯಾವುದೇ ಡಿನ್ನರ್, ಹೋಟೆಲ್, ರೆಸಾರ್ಟ್, ರೂಮ್‍ಗೆ ಕರೆದಿಲ್ಲ. 35 ವರ್ಷದಿಂದ ಚಿತ್ರರಂಗದಲ್ಲಿ ಇದ್ದು, ಒಂದು ಕಪ್ಪು ಚುಕ್ಕೆ ನನ್ನ ಮೇಲಿಲ್ಲ. ಆದರೆ ಇಂದು ಇವರು ಮಾಡಿರುವ ಆರೋಪದಿಂದ ನನಗೂ, ನನ್ನ ಕುಟುಂಬಸ್ಥರಿಗೂ ಸಾಕಷ್ಟು ನೋವಾಗಿದೆ. ಈ ವೇಳೆ ಶೃತಿ ಅವರಿಗೆ ಮಾತನಾಡಲು ಅವಕಾಶ ನೀಡುವಂತೆ ಅಂಬರೀಶ್ ತಡೆದಿದ್ದರು.

ನನಗೆ ಎಷ್ಟು ನೋವಾಗಿದೆ ಎಂದು ನನಗೆ ಮಾತ್ರ ಗೊತ್ತು. 5 ಭಾಷೆಗಳಲ್ಲಿ ನಟನೆ ಮಾಡಿದ್ದೇನೆ. ಹಿರಿಯ ನಟರೊಂದಿಗೆ ಅಭಿನಯ ಮಾಡಿದ್ದೇನೆ. ಯಾರು ಈ ಕುರಿತು ಒಂದು ಮಾತು ಕೆಟ್ಟದಾಗಿ ಮಾತನಾಡಿಲ್ಲ. ಆದರೆ ಇವರು ಇಲ್ಲದ ಆರೋಪ ಮಾಡಿ ನನ್ನ ಹೆಸರಿಗೆ ಧಕ್ಕೆ ತಂದಿದ್ದಾರೆ.

ಶೃತಿ: ಧ್ರುವ ಸರ್ಜಾ ನಟ ಚೇತನ್ ವಿರುದ್ಧ ನಾಯಿ, ಕ್ರಿಮಿ ಕೀಟ ಎಂದು ಹೇಳಿಕೆ ನೀಡಿದ್ದನ್ನು ಪ್ರಸ್ತಾಪಿಸಿದ ಅವರು, ನನ್ನ ಪರ ನಿಂತ ತಪ್ಪಿಗಾಗಿ ಅವರ ಮೇಲೆ ಈ ರೀತಿ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಂಬರೀಶ್ ಅವರು, ಯುವಕ ಏನೋ ಮಾತನಾಡಿದ್ದಾನೆ ಅದನ್ನು ಸುಮ್ಮನೆ ಅಲ್ಲಿಗೆ ಬಿಟ್ಟರೆ ಒಳ್ಳೆಯದು ಎಂದು ಸುಮ್ಮನಾಗಿಸಿದರು.

ನನ್ನ ಬಳಿ ಇವರು ಕೆಟ್ಟದಾಗಿ ನಡೆದುಕೊಂಡ ಬಗ್ಗೆ ಸಾಕ್ಷಿ ಇದೆ. ಕಾನೂನು ಮೂಲಕವೇ ಹೋರಾಟ ಮಾಡುತ್ತೇನೆ ಎಂದು ಶೃತಿ ಹರಿಹರನ್ ಹೇಳಿದ್ದು, ಈ ಮಾತಿಗೆ ಪ್ರತಿಕ್ರಿಯೆ ನೀಡಿದ ಅರ್ಜುನ್ ಸರ್ಜಾ ಅವರು ಇವರ ಆರೋಪ ರಹಿತ ಹೇಳಿಕೆ ಇಂದ ನನಗೆ ಸಾಕಷ್ಟು ತೊಂದರೆ ಆಗಿದೆ. ಬಹಿರಂಗ ಕ್ಷಮೆ ಕೇಳಲೇಬೇಕು. ಇಲ್ಲವಾದರೆ ಕೋರ್ಟ್ ನಲ್ಲೇ ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದರು. ಬಳಿಕ ಇಬ್ಬರ ಹೇಳಿಕೆ ಪ್ರತ್ಯೇಕವಾಗಿ ಪಡೆಯಲು ಹಿರಿಯ ಮುಖಂಡರು ತೀರ್ಮಾನಿಸಿ ಬೇರೆ ಬೇರೆ ಹೇಳಿಕೆ ಪಡೆಯಲು ಮುಂದಾದರು.

ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದ ನಟಿ ಶೃತಿ ಹರಿಹರನ್ ನಡುವಿನ ವಿವಾದ ಚಿತ್ರರಂಗದ ಹಿರಿಯ ನಡುವೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕ, ನಿರ್ದೇಶಕರಾದರು ಭಾಗವಹಿಸಿದ್ದರು. ಕೆ ಮುಂಜು, ಹಿರಿಯ ನಟ ಲೋಕನಾಥ್, ನಿರ್ಮಾಪಕ ಟೇಶಿ ವೆಂಕಟೇಶ್, ನಿರ್ಮಾಪಕ ಸುರೇಶ್, ನಿರ್ಮಾಪಕ ಉಮೇಶ್ ಬಣಕರ್, ಮಾಜಿ ಅಧ್ಯಕ್ಷ ಥಾಮಸ್ ಡಿ ಸೋಜಾ, ನಿರ್ಮಾಪಕ ಗಿರೀಶ್, ಕಲಾವಿದರ ಸಂಘದ ದೊಡ್ಡಣ್ಣ, ನಿರ್ಮಾಪಕರದ ರಾಕ್‍ಲೈನ್ ವೆಂಕಟೇಶ ಅವರು ಭಾಗವಹಿಸಿದ್ದರು. ಅಲ್ಲದೇ ನಟಿಯಾರದ ಪೂಜಾಗಾಂಧಿ, ಪ್ರಮೀಳಾ ಜೊಷಾಯ್, ರೂಪ ಅಯ್ಯರ್ ಸೇರಿದಂತೆ ಶೃತಿ ಅವರೊಂದಿಗೆ ಕವಿತಾ ಲಂಕೇಶ್ ಆಗಮಿಸಿದ್ದರು. ಅರ್ಜುನ್ ಸರ್ಜಾ ಅವರೊಂದಿಗೆ ಅವರ ಮಾವ, ನಟ ರಾಜೇಶ್ ಹಾಗೂ ಧ್ರುವ ಸರ್ಜಾ ಆಗಮಿಸಿದ್ದರು.

ಸಭೆಗೂ ಮುನ್ನವೇ ನಟಿ ಶೃತಿ ಹರಿಹರನ್ ಸಭೆಯನ್ನು ಸಂಧಾನ ಸಭೆ ಅಲ್ಲ. ಸಂಧಾನ ಮಾಡಿಕೊಳ್ಳುವ ಕುರಿತು ಯಾವುದೇ ಯೋಚನೆ ಇಲ್ಲ. ನ್ಯಾಯಾಲಯದ ಮೂಲಕವೇ ಈ ಕುರಿತು ಹೋರಾಟ ನಡೆಸುವುದಾಗಿ ತಿಳಿಸಿದ್ದರು. ಅಲ್ಲದೇ ವಾಣಿಜ್ಯ ಮಂಡಳಿಯ ಕೆ. ಮಂಜು ಅವರು ಸ್ಪಷ್ಟನೆ ನೀಡಿ ಸದ್ಯ ನಡೆಯುತ್ತಿರುವ ಸಭೆ ಕೇವಲ ವಿಚಾರಣೆ ಸಭೆ ಅಷ್ಟೇ. ರಾಜೇಶ್ ಅವರು ವಾಣಿಜ್ಯ ಮಂಡಳಿಗೆ ನೀಡಿದ್ದ ದೂರಿನ ಅನ್ವಯ ವಿಚಾರಣೆ ನಡೆಯುತ್ತದೆ ಎಂದು ತಿಳಿಸಿದ್ದರು.

ಶೃತಿ ಹರಿಹರನ್ ಆರೋಪಕ್ಕೆ ಈಗಾಗಲೇ ಕಾನೂನು ಹೋರಾಟ ಮಾಡಿರುವ ನಟ ಅರ್ಜುನ್ ಸರ್ಜಾ ಅವರು ದೂರು ನೀಡಿದ್ದು, 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಅಲ್ಲದೇ ಸೈಬರ್ ಕ್ರೈಂ ಗೂ ದೂರು ನೀಡಿದ್ದು, ತಮ್ಮ ಇಮೇಲ್ ಹ್ಯಾಕ್ ಮಾಡಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಈ ದೂರಿನಲ್ಲಿ ಪ್ರಮುಖವಾಗಿ ಅನಾಮಿಕ ವ್ಯಕ್ತಿಯೊಬ್ಬ ಶ್ರುತಿ ಅವರ ಆರೋಪ ತಣ್ಣಗಾಗುವಂತೆ ಮಾಡಲು 1.5 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಅರ್ಜುನ್ ಸರ್ಜಾ ಅವರ ಮ್ಯಾನೇಜರ್ ದೂರು ನೀಡಿದ್ದಾರೆ.

Comments are closed.