ಮನೋರಂಜನೆ

1,200 ವಾರ ಪೂರೈಸಿದ ಶಾರುಕ್ ಖಾನ್, ಕಾಜೋಲ್ ಅಭಿನಯದ “ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ’

Pinterest LinkedIn Tumblr


ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಹಲವಾರು ದಾಖಲೆಗಳನ್ನು ಬರೆದು “ಟ್ರೆಂಡ್‌ ಸೆಟ್ಟರ್‌’ ಎನಿಸಿಕೊಂಡ, ಶಾರುಖ್‌ ಖಾನ್‌ ಹಾಗೂ ಕಾಜೋಲ್‌ ಅಭಿನಯದ 1995ರ ಬ್ಲಾಕ್‌ ಬಸ್ಟರ್‌ ಸಿನಿಮಾ “ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಚಿತ್ರ ಮುಂಬೈನ ಮರಾಠವಾಡಾ ಚಿತ್ರಮಂದಿರದಲ್ಲಿ 1,200 ವಾರಗಳನ್ನು ಪೂರೈಸಿ ಹೊಸ ದಾಖಲೆ ಬರೆದಿದೆ.

1995ರ ಅ. 19ರಂದು ಬಿಡುಗಡೆಯಾಗಿದ್ದ ಈ ಚಿತ್ರ 2015ರಲ್ಲಿ ಇದೇ ಚಿತ್ರಮಂದಿರದಲ್ಲಿ 1000 ವಾರಗಳ ಪ್ರದರ್ಶನ ಪೂರೈಸಿ ಇತಿಹಾಸ ನಿರ್ಮಿಸಿತ್ತು. ಚಿತ್ರ ತೆರೆಕಂಡು 23 ಸಂವತ್ಸರಗಳಾದರೂ ಅಭಿಮಾನಿಗಳು ಆ ಚಿತ್ರದ ಬಗ್ಗೆ ತೋರುತ್ತಿರುವ ಪ್ರೀತಿಗೆ ಟ್ವೀಟರ್‌ನಲ್ಲಿ ಶಾರುಖ್‌ ಹಾಗೂ ಕಾಜೋಲ್‌ ಧನ್ಯವಾದ ಅರ್ಪಿಸಿದ್ದಾರೆ.

Comments are closed.