ಮನೋರಂಜನೆ

ವಿಜಿ 2ನೇ ಪತ್ನಿ ಕೀರ್ತಿಗೌಡ ಮೇಲೆ ನಾಗರತ್ನಾ ಹಲ್ಲೆ: ಬಂಧನಕ್ಕೆ ವಿಶೇಷ ಪೊಲೀಸ್​ ತಂಡ ರಚನೆ

Pinterest LinkedIn Tumblr

ಬೆಂಗಳೂರು,: ಕೀರ್ತಿ ಗೌಡ ಮೇಲೆ ನಡೆದ ಹಲ್ಲೆಯ ದೃಶ್ಯಗಳು ಬಯಲಾದ ನಂತರದಲ್ಲಿ ‘ದುನಿಯಾ’ ವಿಜಿ ನಾಗರತ್ನಾ ಮೇಲೆ ಕಿಡಿಕಾರಿದ್ದು, ‘ಅವಳು ಮಕ್ಕಳನ್ನು ವೆಪನ್​ ಆಗಿ ಬಳಕೆ ಮಾಡಿಕೊಂಡಿದ್ದಾಳೆ’ ಎಂದಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಿ ಅವರನ್ನು ಸಂಪರ್ಕಿಸಿದಾಗ, ‘ಕೀರ್ತಿ ಮನೆ ಬಿಟ್ಟು ಹೋಗಬೇಕು. ನನ್ನನ್ನು ಮತ್ತೆ ಜೈಲಿಗೆ ಕಳುಹಿಸಬೇಕು ಎಂಬ ಕಾರಣಕ್ಕೆ ನಾಗರತ್ನಾ ಮಕ್ಕಳನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ನಾನು ಮೂರು ದಿನಗಳಲ್ಲಿ ಸತ್ಯ ಹೇಳುತ್ತೇನೆ ಎಂದು ಹೇಳಿದ್ದೆ. ಅದನ್ನು ಹೇಳಿದ್ದೇನೆ’ ಎಂದಿದ್ದಾರೆ. ಇಂದು ಸಂಜೆ ಅವರು ಸುದ್ದಿಗೋಷ್ಠಿ ಕರೆದಿದ್ದು ಈ ವೇಳೆ ಮಾತನಾಡುವುದಾಗಿ ಅವರು ತಿಳಿಸಿದ್ದಾರೆ.

ನಾಗರತ್ನಾ ಅವರೇ ಹಲ್ಲೆ ನಡೆಸಿದ್ದರು ಎಂಬ ಬಗ್ಗೆ ಈ ಮೊದಲೇ ಏಕೆ ಹೇಳಿಲ್ಲ ಎಂಬುದಕ್ಕೆ ಕೀರ್ತಿ ಉತ್ತರಿಸಿದ್ದಾರೆ. ‘ನನಗೆ ಕುಟುಂಬದ ವಿಚಾರ ಹೊರಗೆ ಬರುವುದು ಇಷ್ಟವಿಲ್ಲ. ಸಂಬಂಧವಿಲ್ಲದವರು ನನಗೆ ಬಂದು ಹೊಡೆಯುತ್ತಾರೆ ಎಂದಾದರೆ ಅದನ್ನೇಕೆ ನಾನು ಹೇಳಿಕೊಳ್ಳಬೇಕು. ಒಮ್ಮೆ ಹೇಳಿಕೊಂಡಿದ್ದರೂ ಅದನ್ನು ಸಾಬೀತುಪಡಿಸಲು ನಮ್ಮ ಬಳಿ ಸಾಕ್ಷ್ಯ ಇರಲಿಲ್ಲ’ ಎಂದಿದ್ದಾರೆ.

ಇನ್ನು, ಕೀರ್ತಿ ಗೌಡ ಹಾಗೂ ಸಹಚರರು ತನ್ನಮೇಲೆ ಹಲ್ಲೆ ನಡೆಸಿದ್ದರು ಎಂದು ನಾಗರತ್ನಾ ದೂರು ನೀಡಿದ್ದ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್​ ಸಿಕ್ಕಿದೆ. ನಾಗರತ್ನ ಅವರೇ ಕೀರ್ತಿಗೌಡ ಮೇಲೆ ಹಲ್ಲೆ ನಡೆಸಿ ಸುಳ್ಳು ದೂರು ದಾಖಲಿಸಿದ್ದರು ಎಂಬುದು ಈಗ ಸಿಸಿಟಿವಿ ದೃಶ್ಯಾವಳಿಗಳಿಂದ ಸಾಬೀತಾಗಿದೆ.

ವಿಜಿ ಜೈಲಿನಲಿದ್ದ ಸಂದರ್ಭದಲ್ಲಿ ಮಗ​​ನನ್ನು ನೋಡಲು ನಾಗರತ್ನಾ ವಿಜಿ ಮನೆಗೆ ಬಂದಿದ್ದರು. ಆಗ ನಾಗರತ್ನ ಚಪ್ಪಲಿಯಿಂದ ಕೀರ್ತಿಗೌಡ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ವಿಜಿ ತಂದೆ ರುದ್ರಪ್ಪ ಕೂಡ ಹಲ್ಲೆಗೆ ಒಳಗಾಗಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.

ಅಚ್ಚರಿ ಎಂದರೆ ವಿಜಿ ಮಗಳು ಮೋನಿಕಾಳೇ ಈ ಪ್ರಕರಣದ ರೂವಾರಿಯಂತೆ. ಘಟನೆ ನಡೆದ ದಿನ ಮೋನಿಕಾ ಸಿಸಿಟಿವಿ ದೃಶ್ಯಗಳನ್ನು ಕಟ್​ ಮಾಡಿ ಪೆನ್ ಡ್ರೈವ್​ಗೆ ಹಾಕಿಕೊಂಡಿದ್ದರು . ಅಲ್ಲದೆ ಸಿಸಿಟಿವಿ ಡಿವಿಆರ್ ವೈರ್ ಕಟ್ ಮಾಡಿ, ಅದನ್ನು ಸಾಮ್ರಾಟ್ ಮಾಡಿದ್ದಾನೆ ಎಂದಿದ್ದರು. ಈಗ ಆ ಪೆನ್​ಡ್ರೈವ್​ ಲಭ್ಯವಾಗಿದ್ದು, ಆ ದಿನ ಏನು ನಡೆದಿತ್ತು ಎಂಬ ವಿಚಾರ ಬಯಲಿಗೆ ಬಂದಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ನಾಗರತ್ನ ವಿರುದ್ಧ ದೂರು ಕೊಡುತ್ತೇವೆ, ಮಾನನಷ್ಟ ಮೊಕದ್ದಮೆ ಹೂಡುತ್ತೇವೆ ಎಂದು ನೀನಾಸಂ ಮಂಜು ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಗಳು ಲಭ್ಯವಾಗಿರುವ ವಿಚಾರ ತಿಳಿಯುತ್ತಿದ್ದಂತೆ ನಾಗರತ್ನಾ ಹಾಗೂ ಮೋನಿಕಾ ತಲೆಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆ ಹಚ್ಚಲು ಪೊಲೀಸರು ತಂಡವೊಂದನ್ನು ರಚಿಸಿದ್ದಾರೆ. ನಾಗರತ್ನ ಕೊಟ್ಟ ದೂರನ್ನು ರದ್ದುಗೊಳಿಸಿ , ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಪೊಲೀಸರು ಚಿಂತನೆ ನಡೆಸಿದ್ದಾರೆ.

Comments are closed.