ಮನೋರಂಜನೆ

ಅದು ಅವರಿಬ್ಬರ ನಡುವಿನ ಸಮಸ್ಯೆ, ಇದಕ್ಕೆ ನಾನು ಬಲಿಪಶುವಾಗಲಾರೆ; ನಟಿ ರಾಧಿಕಾ ಕುಮಾರಸ್ವಾಮಿ

Pinterest LinkedIn Tumblr


ಅದು ಅವರಿಬ್ಬರಿಗೆ ಸಂಬಂಧಿಸಿದ ವಿಷಯ. ಅವರಿಬ್ಬರ ನಡುವಿನ ಸಮಸ್ಯೆಯನ್ನು ಅವರೇ ಬಗೆಹರಿಸಿಕೊಳ್ಳುತ್ತಾರೆ. ಸುಖಾಸುಮ್ಮನೆ ಮಧ್ಯೆ ಬಂದು ಬಲಿಪಶುವಾಗಲು ನನಗೆ ಇಷ್ಟವಿಲ್ಲ..’ – ಇದು ರಾಧಿಕಾ ಕುಮಾರಸ್ವಾಮಿ ಅವರ ಮಾತು. ಅವರು ಹೀಗೆ ಹೇಳಿದ್ದು ಬೇರಾರ ಬಗ್ಗೆಯೂ ಅಲ್ಲ, ಮುಖ್ಯಮಂತ್ರಿ ಎಚ್‌ .ಡಿ.ಕುಮಾರಸ್ವಾಮಿ ಹಾಗು ಶಾಸಕ ಕುಮಾರ ಬಂಗಾರಪ್ಪ ಅವರನ್ನು ಕುರಿತು.

ಅವರು ಹೀಗೆ ಹೇಳ್ಳೋಕೆ ಕಾರಣವಿಷ್ಟೇ. ಕಳೆದ ಎರಡು ದಿನಗಳ ಹಿಂದಷ್ಟೇ, ಕುಮಾರ್‌ ಬಂಗಾರಪ್ಪ ಅವರು, “ಕುಮಾರಸ್ವಾಮಿ ಅವರ ಕುಟುಂಬದಲ್ಲಿ ಈಗಾಗಲೇ ಒಬ್ಬ ಪತ್ನಿ ರಾಮನಗರದಿಂದ ಸ್ಪರ್ಧಿಸುತ್ತಿದ್ದಾರೆ. ಅವರ ಕುಟುಂಬದ ಸದಸ್ಯರು ಹಾಸನ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್‌ ಸದಸ್ಯರಾಗಿದ್ದಾರೆ.

ಹಾಗೆಯೇ ರಾಧಿಕಾರನ್ನು ಯಾಕೆ ಚುನಾವಣಾ ಪ್ರಚಾರಕ್ಕೆ ಕರೆಸಿಕೊಳ್ಳಬಾರದು’ ಎಂದು ಹೇಳಿಕೆ ಕೊಟ್ಟಿದ್ದರು. ಕುಮಾರ ಬಂಗಾರಪ್ಪ ಅವರ ಈ ಮಾತಿಗೆ ಸಿಎಂ ಕುಮಾರಸ್ವಾಮಿ, “ವೈಯಕ್ತಿಕ ವಿಚಾರ ಮಾತನಾಡುವುದು ಸರಿಯಲ್ಲ’ ಎಂದಿದ್ದರು. ಈ ಕುರಿತು ರಾಧಿಕಾ ಕುಮಾರಸ್ವಾಮಿ ಅವರನ್ನು ಮಾತನಾಡಿಸಿದಾಗ, ಪ್ರತ್ರಿಕಿಯಿಸಿದ ರಾಧಿಕಾ ಕುಮಾರಸ್ವಾಮಿ, ಹೇಳಿದ್ದಿಷ್ಟು. “ಅದು ಅವರಿಬ್ಬರ ನಡುವಿನ ವಿಷಯ. ಅವರೇ ಆ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಾರೆ. ಸುಖಾಸುಮ್ಮನೆ ಮಧ್ಯೆ ಬಂದು ಬಲಿಪಶುವಾಗಲು ನನಗೆ ಇಷ್ಟವಿಲ್ಲ. ಹಾಗಾಗಿ ನಾನು ಈ ಬಗ್ಗೆ ಹೆಚ್ಚೇನೂ ಮಾತನಾಡುವುದಿಲ್ಲ. ನನ್ನ ಸಿನಿಮಾ ಕೆರಿಯರ್‌ ಕಡೆ ಹೆಚ್ಚು ಗಮನ ಕೊಡುತ್ತಿದ್ದೇನೆ’ ಎಂದಿದ್ದಾರೆ.

ಸದ್ಯಕ್ಕೆ ರಾಧಿಕಾ ಕುಮಾರಸ್ವಾಮಿ ಅವರೀಗ “ಭೈರಾದೇವಿ’ ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ. ಅದರ ಬೆನ್ನಲ್ಲೇ ಅವರು “ದಮಯಂತಿ’ ಎಂಬ ಮತ್ತೂಂದು ಹೊಸ ಬಗೆಯ ಚಿತ್ರದಲ್ಲೂ ನಟಿಸಲು ಒಪ್ಪಿದ್ದಾರೆ. ಇದರ ನಡುವೆ ಒಂದಷ್ಟು ಚಿತ್ರಗಳ ಕಥೆ ಕೇಳುತ್ತಿದ್ದು, ಇಷ್ಟರಲ್ಲೇ ಹೊಸ ಚಿತ್ರಗಳ ಬಗ್ಗೆ ಮಾಹಿತಿಯೂ ಕೊಡಲಿದ್ದಾರೆ.

Comments are closed.