ಮನೋರಂಜನೆ

ಬಿಗ್ ಬಾಸ್ ಮನೆಯಿಂದ ನಗುತ್ತಲೇ ಹೊರಹೋದ ರೀಮಾ

Pinterest LinkedIn Tumblr

ನೋಡು ನೋಡುತ್ತಿದ್ದಂತೆ ಬಿಗ್ ಬಾಸ್ ಆರನೇ ಆವೃತ್ತಿ ಎರಡು ವಾರ ಪೂರೈಸಿದೆ. ಶನಿವಾರ ಎಲಿಮಿನೇಷನ್ ರೌಂಡ್ ಇದ್ದು ಸಹಜವಾಗಿ ಬಿಗ್‌ ಬಾಸ್ ಮನೆಯಲ್ಲಿ ಒಂದು ರೀತಿ ಬಿಗುವಿನ ವಾತಾವರಣ ಆವರಿಸಿತ್ತು.

ಕೊನೆಯದಾಗಿ ನಾಮಿನೇಟ್ ಆಗಿದ್ದ ಸದಸ್ಯರ ಪೈಕಿ ರೀಮಾ ಅವರು ಈ ವಾರ ಮನೆಯಿಂದ ಔಟ್ ಆಗಿದ್ದಾರೆ.

ಅಕ್ಷತಾ ಪಾಂಡವಪುರ, ಆಡಮ್ ಪಾಶಾ, ಆಂಡ್ರ್ಯೂ, ಕವಿತಾ, ನಯನಾ, ರಾಕೇಶ್, ರಶ್ಮಿ, ರೀಮಾ, ಶಶಿ, ಸ್ನೇಹಾ, ಸೋನು ಅವರು ನಾಮಿನೇಟ್ ಆಗಿದ್ದರು.

ಇನ್ನು ಕಳೆದ ವಾರ ಬಿಗ್ ಬಾಸ್‌ ಮನೆಗೆ ಆಗಮಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು, ತಾವು ನೀಡಿದ ಭರವಸೆಯಂತೆ ಸ್ಪರ್ಧಿಗಳಿಗೆ ಊಟ ಕಳುಹಿಸಿಕೊಟ್ಟಿದ್ದಾರೆ. ಆದರೆ, ಬಿಗ್ ಬಾಸ್ ಮನೆಯ ನಿಯಮ ಉಲ್ಲಂಘಿಸಿರುವ ಆಂಡ್ರ್ಯೂಗೆ ಈ ಊಟದ ಭಾಗ್ಯ ಲಭ್ಯವಾಗಲಿಲ್ಲ.

ಪ್ರತಿ ವಾರದಂತೆ ಬಿಗ್‌ ಬಾಸ್ ಮನೆಗೆ ಆಗಮಿಸಿರುವ ಕಿಚ್ಚ ಸುದೀಪ್, ಉಭಯಕುಶಲೋಪರಿ ವಿಚಾರಿಸುತ್ತ ಸ್ಪರ್ಧಿಗಳ ಕಾಲೆಳೆದರು. ಎರಡನೇ ಎಲಿಮಿನಿಷೇನ್ ಸುತ್ತು ಆರಂಭವಾಗುವ ಮುನ್ನ ಬಿಗ್ ಬಾಸ್ ಮನೆ ಸದಸ್ಯರ ನಡುವೆ ಗಂಭೀರ ಚರ್ಚೆಗಳು ನಡೆಯಿತು.

ಮೊದಲು ರಶ್ಮಿ ಹಾಗೂ ನಯನಾ ಅವರು ಸೇಫ್ ಎಂದು ಕಿಚ್ಚ ಸುದೀಪ್ ಘೋಷಿಸಿದರು. ‘ನನಗೆ ಮತ ನೀಡಿರುವ ಎಲ್ಲರಿಗೂ ಧನ್ಯವಾದಗಳು’ ಎಂದು ರಶ್ಮಿ ತಿಳಿಸಿದರು.

ಬಳಿಕ ಆಡಮ್ ಪಾಶಾ ಹಾಗೂ ಶಶಿ ಹಾಗೂ ಕವಿತಾ ಸೇರಿದಂತೆ ಉಳಿದ ಸ್ಪರ್ಧಿಗಳು ಸೇಫ್ ಜೋನ್ ಸೇರಿದರೆ, ಸ್ನೇಹಾ ಹಾಗೂ ರೀಮಾ ನಡುವೆ ಸ್ಪರ್ಧೆ ಏರ್ಪಟ್ಟು ಎಲ್ಲರಲ್ಲೂ ಕುತೂಹಲ ಮೂಡಿಸಿತ್ತು. ಕೊನೆಗಳಿಗೆಯಲ್ಲಿ ಸ್ನೇಹಾ ಅವರು ಸೇಫ್ ಆದರೆ, ರೀಮಾ ಅವರು ಮನೆಯಿಂದ ಹೊರ ನಡೆಬೇಕಾಯಿತು.

Comments are closed.