ಹೈದರಾಬಾದ್: ನಟ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಚಿತ್ರದ ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ಚಿತ್ರದ ಕುರಿತ ನಿರೀಕ್ಷೆಗಳು ಮುಗಿಲು ಮುಟ್ಟಿದೆ. ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿರುವ ಚಿತ್ರದ ಟ್ರೈಲರ್ ನೋಡಿ ಸ್ವತಃ ಬಾಹುಬಲಿ ನಟ ರಾಣಾ ದಗ್ಗುಬಾಟಿ ದಂಗಾಗಿದ್ದು, ಚಿತ್ರತಂಡಕ್ಕೆ ಶುಭಕೋರಿದ್ದಾರೆ.
‘ಕೆ.ಜಿ.ಎಫ್’ ಟ್ರೈಲರ್ ನೋಡಿ ಸಿನಿ ಪ್ರಿಯರು ಕ್ಲೀನ್ ಬೌಲ್ಡ್ ಆಗಿದ್ದು, ಚಿತ್ರ ಐದು ಭಾಷೆಗಳಲ್ಲಿ ಡಬ್ ಆಗುತ್ತಿದೆ. ಅತ್ತ ಬಾಲಿವುಡ್ ನಲ್ಲಿ ನಟ ಶಾರುಖ್ ಖಾನ್ ಅಭಿನಯದ ಜೀರೋ ಚಿತ್ರಕ್ಕೆ ಠಕ್ಕರ್ ನೀಡುತ್ತಿರುವ ಕೆಜಿಎಫ್ ಚಿತ್ರದ ಟ್ರೈಲರ್ ಗೆ ಬಾಲಿವುಡ್ ಮಂದಿ ಕೂಡ ಫಿದಾ ಆಗಿದ್ದು, ಕೋಲಾರ ಚಿನ್ನದ ಗಣಿಯ ರಕ್ತ ಚರಿತ್ರೆ ಸಾರುವ ‘ಕೆ.ಜಿ.ಎಫ್’ ಚಿತ್ರದ ಟ್ರೈಲರ್ ಗೆ ರಾಮ್ ಗೋಪಾಲ್ ವರ್ಮಾ, ಕಿಚ್ಚ ಸುದೀಪ್ ಸೇರಿದಂತೆ ಹಲವು ತಾರೆಯರು ಫಿದಾ ಆಗಿದ್ದಾರೆ.
ಇದೀಗ ಈ ಪಟ್ಟಿಗೆ ಬಾಹುಬಲಿ ನಟ ರಾಣಾ ದಗ್ಗುಬಾಟಿ ಕೂಡ ಸೇರಿದ್ದು, ಚಿತ್ರದ ಟ್ರೇಲರ್ ನೋಡಿ ಖುಷಿಯಾಗಿರುವ ರಾಣಾ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ರೈಲರ್ ಶೇರ್ ಮಾಡಿದ್ದಲ್ಲದೇ ಯಶ್ ಮತ್ತು ಕೆಜಿಎಫ್ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.
Best wishes to everyone in team #KGF.@NimmaYash @hombalefilms @VaaraahiCC #KGFTrailerhttps://t.co/YcPY7Ppv2z
— Rana Daggubati (@RanaDaggubati) November 9, 2018
Comments are closed.