ಮನೋರಂಜನೆ

ಕ್ಯಾನ್ಸರ್​ನಿಂದ ಬಳಲುತ್ತಿರುವ ಸೊನಾಲಿ ಬೇಂದ್ರೆಯಿಂದ ಪತಿಗೆ ಪತ್ರ

Pinterest LinkedIn Tumblr


ಬಾಲಿವುಡ್​ ನಟಿ ಸೊನಾಲಿ ಬೇಂದ್ರೆ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿರುವ ಮಾಹಿತಿಯನ್ನು ಅವರೇ ಹಂಚಿಕೊಂಡಿದ್ದರು. ಅವರು ಕಿಮೋಥೆರಪಿ ಪಡೆದುಕೊಳ್ಳುವ ಸಲುವಾಗಿ ತಲೆಗೂದಲನ್ನು ಬೋಳಿಸಿಕೊಂಡ ಫೋಟೋವನ್ನು ಜಾಲತಾಣಗಳಲ್ಲಿ ಪೋಸ್ಟ್​ ಮಾಡಿದಾಗ ಅಭಿಮಾನಿಗಳು ಸಾಂತ್ವನದ ಮಾತುಗಳನ್ನಾಡಿದ್ದರು. ಅಷ್ಟೆಲ್ಲ ನೋವನ್ನು ಅನುಭವಿಸುತ್ತಿದ್ದರೂ ಸೊನಾಲಿಯ ಆ ಮುದ್ದಾದ ನಗು ಮಾತ್ರ ಮರೆಯಾಗಿಲ್ಲ.

ಅಂದಹಾಗೆ, ಕನ್ನಡದ ‘ಪ್ರೀತ್ಸೆ’ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಮತ್ತು ಉಪೇಂದ್ರ ಜೊತೆಗೆ ತೆರೆ ಹಂಚಿಕೊಂಡಿದ್ದ ಸೊನಾಲಿ ಬೇಂದ್ರೆ ಅವರ ವಿವಾಹ ವಾರ್ಷಿಕೋತ್ಸವ ಇಂದು. ಸಿನಿಮಾ ನಿರ್ದೇಶಕ ಗೋಲ್ಡಿ ಬೆಹ್ಲ್​ ಅವರನ್ನು ಮದುವೆಯಾಗಿದ್ದ ಸೊನಾಲಿ ಬೇಂದ್ರೆ 16ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ.

ತಮ್ಮ ಪ್ರೀತಿಯ ಗಂಡನಿಗೆ ವಾರ್ಷಿಕೋತ್ಸವದ ಶುಭಾಶಯ ಕೋರಿರುವ ಸೊನಾಲಿ ಇನ್​ಸ್ಟಾಗ್ರಾಂನಲ್ಲಿ ತಮ್ಮ ಮತ್ತು ಗಂಡನ ಹಳೆಯ ಫೋಟೋಗಳನ್ನು ಶೇರ್​ ಮಾಡಿದ್ದಾರೆ. ಇದರ ಜೊತೆಗೆ ಮನಕಲಕುವ ಪತ್ರವೊಂದನ್ನು ಬರೆದಿದ್ದಾರೆ. ಆ ಪತ್ರವನ್ನು ಓದುತ್ತಿದ್ದರೆ ಎಂಥವರ ಮನಸು ಕೂಡ ಕರಗುತ್ತದೆ.

ಏನಿದೆ ಪತ್ರದಲ್ಲಿ?
ನಾನೇನೋ ನನಗೆ ಅನಿಸಿದ್ದನ್ನೆಲ್ಲ ಬರೆಯಬೇಕು ಎಂದುಕೊಂಡು ಕುಳಿತಿದ್ದೇನೆ. ಆದರೆ, ನಮ್ಮೆಲ್ಲ ಭಾವನೆಗಳನ್ನು ಅಕ್ಷರಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ ಎಂದು ನನಗೂ ಗೊತ್ತಿದೆ. ನನ್ನ ಗಂಡ… ನನ್ನ ಒಳ್ಳೆಯ ಸಂಗಾತಿ, ಅತ್ಯುತ್ತಮ ಗೆಳೆಯ, ನನ್ನೆಲ್ಲವೂ ನನ್ನ ಗಂಡನೇ. ಮದುವೆಯಾದ ಇಷ್ಟು ವರ್ಷವೂ ನನ್ನ ಪ್ರತಿ ಖುಷಿ, ಬೇಸರ, ನೋವಿನಲ್ಲೂ ನನ್ನ ಗಂಡ ನನ್ನ ಜೊತೆಗಿದ್ದಾನೆ. ಈಗ ನಾನು ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿರುವಾಗಲೂ ನನಗೆ ಬೇಕಾದ ಎಲ್ಲ ಮಾನಸಿಕ ಸ್ಥೈರ್ಯವನ್ನು ಆತ ತುಂಬಿದ್ದಾನೆ.

Comments are closed.