ಬೆಂಗಳೂರು: 2018ರ ಲೇಡಿ ಸುಪರ್ ಸ್ಟಾರ್ ಖ್ಯಾತಿಯ ಬಹುಭಾಷಾ ನಟಿ ನಯನತಾರಾ ಮಗುವಿನೊಂದಿಗೆ ಮಗುವಾಗಿ ಕಾಲ ಕಳೆದಿದ್ದು ಈ ವಿಡಿಯೋ ಸಖತ್ ವೈರಲ್ ಆಗಿದೆ.
ಅಜೆರ್ಬೈಜಾನ್ ಎಸ್‍ಕೆ 13 ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಅಲ್ಲಿಗೆ ಬಂದಿದ್ದ ಪುಟ್ಟ ಬಾಲಕಿಯ ಜೊತೆಗೆ ನಯನತಾರಾ ಮಕ್ಕಳಂತೆ ಕಾಲಕಳೆದಿದ್ದಾರೆ. ಈ ವಿಡಿಯೋವನ್ನು ತಮ್ಮ ಟ್ವೀಟರ್ ಮೂಲಕ ಹಂಚಿಕೊಂಡಿದ್ದು, ಶನಿವಾರ ಸಂಜೆ 7 ಗಂಟೆ ಸುಮಾರಿಗೆ 80 ಸಾವಿರಕ್ಕೂ ಹೆಚ್ಚು ಜನ ನೋಡಿದ್ದಾರೆ. ಈ ವಿಡಿಯೋ 2,435 ರೀ ಟ್ವೀಟ್ ಆಗಿದ್ದು, 20,978 ಜನರು ಲೈಕ್ ಮಾಡಿದ್ದಾರೆ.
ವಿಡಿಯೋದಲ್ಲಿ ಏನಿದೆ?:
ಮುದ್ದಾದ ಬಾಲಕಿಯೊಬ್ಬಳು ನಯನತಾರಾ ಪಕ್ಕದಲ್ಲಿ ನಿಂತಿರುತ್ತಾಳೆ. ಬಾಲಕಿಯ ಎತ್ತರಕ್ಕೆ ಸರಿಹೋಗುವಂತೆ ಕುಳಿತ ನಟಿ ನಯನತಾರಾ ಆಕೆಯ ಜೊತೆಗೆ ಆಟವಾಡುತ್ತಾರೆ. ಬಾಲಕಿ ಕೂಡ ಅಷ್ಟೇ ಮುದ್ದು ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಡುತ್ತಾಳೆ. ಬಳಿಕ ನಗುತ್ತಾ ನಯನತಾರಾ ಕೆನ್ನೆ ಸವರಿ ನಗೆಯನ್ನು ಬೀರುತ್ತಾಳೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಅನೇಕರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.
Comments are closed.