ಮನೋರಂಜನೆ

ಹರಿದ ಜೀನ್ಸ್ ಧರಿಸಿ ಟ್ರೋಲ್ ಆದ ಐಶ್ವರ್ಯ ರೈ ಬಚ್ಚನ್!

Pinterest LinkedIn Tumblr


ಮುಂಬೈ: ಬಾಲಿವುಡ್ ಸುಂದರಿ ಐಶ್ವರ್ಯ ರೈ ಬಚ್ಚನ್ ಶಾಲಾ ಕಾರ್ಯಕ್ರಮದಲ್ಲಿ ಹರಿದ ಜೀನ್ಸ್ ಧರಿಸಿ ಟ್ರೋಲ್ ಆಗಿದ್ದಾರೆ.

ಮಂಗಳವಾರ ಮುಂಬೈನ ಜಮ್‍ನಬಿ ನರ್ಸಿ ಸ್ಕೂಲ್ ಆಯೋಜಿಸಿದ್ದ ವಿಶೇಷ ಚೇತನರ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಐಶ್ವರ್ಯ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಐಶ್ವರ್ಯ ಈ ಕಾರ್ಯಕ್ರಮದಲ್ಲಿ ಟೋರ್ನ್ ಡೆನಿಮ್(ಜೀನ್ಸ್) ಧರಿಸಿ ಅದಕ್ಕೆ ಪಿಂಕ್ ಬಣ್ಣದ ಬ್ಲೇಜರ್ ಧರಿಸಿದ್ದರು. ಈಗ ಐಶ್ವರ್ಯ ಧರಿಸಿದ ಉಡುಪು ಬಗ್ಗೆ ಜನರು ಟ್ರೋಲ್ ಮಾಡ ತೊಡಗಿದ್ದಾರೆ. ಶಾಲಾ ಕಾರ್ಯಕ್ರಮದಲ್ಲಿ ಐಶ್ವರ್ಯ ಈ ರೀತಿ ಹರಿದ ಜೀನ್ಸ್ ಹಾಕಿ ಧರಿಸಿದ್ದು ಸರಿಯಲ್ಲ ಎಂದು ಬರೆದು ಪ್ರಶ್ನೆ ಮಾಡುತ್ತಿದ್ದಾರೆ.

ಐಶ್ವರ್ಯ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಶೇಷ ಚೇತನ ಮಕ್ಕಳನ್ನು ಪ್ರೋತ್ಸಾಹಿಸಿದರು. ಅಲ್ಲದೇ ಐಶ್ವರ್ಯ ವಿಶೇಷ ಚೇತನ ಮಕ್ಕಳ ಸಾಧನೆ ಹಾಗೂ ಶ್ರಮ ನೋಡಿ ಸ್ವತಃ ಸೆಲ್ಯೂಟ್ ಮಾಡುವುದರ ಮೂಲಕ ಅವರಿಗೆ ಗೌರವ ನೀಡಿದರು.

ಐಶ್ವರ್ಯ ಈಗ ಅನುರಾಗ್ ಕಶ್ಯಪ್ ನಿರ್ದೇಶನದ ‘ಗುಲಾಬ್ ಜಾಮೂನ್’ ಚಿತ್ರದಲ್ಲಿ ತಮ್ಮ ಪತಿ ಅಭಿಷೇಕ್ ಬಚ್ಚನ್ ಜೊತೆ ನಟಿಸುತ್ತಿದ್ದಾರೆ. ಐಶ್ವರ್ಯ ಈ ಹಿಂದೆ ‘ಫನೆ ಖಾನ್’ ಚಿತ್ರದಲ್ಲಿ ನಟಿಸಿದ್ದರು. ಆದರೆ ಈ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಹೆಚ್ಚು ಸದ್ದು ಮಾಡಲಿಲ್ಲ.

Comments are closed.