ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಿತ್ರ ದೇಶಾದ್ಯಂತ ತೆರೆಕಾಣಲು ಕ್ಷಣಗಣನೆ ಶುರುವಾಗಿದ್ದು ಈ ಮಧ್ಯೆ ಚಿತ್ರದ ಟಿಕೆಟ್ ಗಾಗಿ ಯುವಕನ ರಕ್ತ ಚೆಲ್ಲಿದೆ.
ಹೌದು ಬಹುನಿರೀಕ್ಷಿತ ಚಿತ್ರವಾಗಿರುವುದರಿಂದ ಚಿತ್ರದ ಟಿಕೆಟ್ ಗಾಗಿ ಬೇಡಿಕೆಯೂ ಹೆಚ್ಚಾಗಿದೆ. ಟಿಕೆಟ್ ಖರೀದಿಗಾಗಿ ಸಿನಿಪ್ರಿಯರು ಥಿಯೇಟರ್ ಗಳಿಗೆ ಮುಗಿಬಿದ್ದಿದ್ದಾರೆ.
ಇನ್ನು ವ್ಯಕ್ತಿಯೊಬ್ಬ ಟಿಕೆಟ್ ಗಾಗಿ ಥಿಯೇಟರ್ ಸಿಬ್ಬಂದಿಯ ಕೈ ಬೆರಳನ್ನೇ ಕಟ್ ಮಾಡಿರುವ ಘಟನೆ ವೀರೇಶ್ ಚಿತ್ರಮಂದಿರದ ಬಳಿ ನಡೆದಿದೆ. ಮಾಗಡಿ ರಸ್ತೆಯ ವೀರೇಶ್ ಚಿತ್ರ ಮಂದಿರದ ಸಿಬ್ಬಂದಿ ಅರವಿಂದ್ ಎಂಬವರ ಬಳಿ ಬ್ಲ್ಯಾಕ್ ಟಿಕೆಟ್ ಮಾರಾಟಗಾರ ರಮೇಶ್(35) ಎಂಬಾತ ಟಿಕೆಟ್ ಕೊಡಿಸುವಂತೆ ಕೇಳಿದ್ದಾನೆ. ಆದರೆ ಸಿಬ್ಬಂದಿ ಆತನಿಗೆ ಟಿಕೆಟ್ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ರಮೇಶ್ ಸಿಬ್ಬಂದಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ಬೆರಳು ಕಟ್ಟಾದ ನಂತರ ಆಸ್ಪತ್ರೆಯಲ್ಲಿ ಅರವಿಂದ್ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಈ ಘಟನೆ ಕುರಿತಂತೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮನೋರಂಜನೆ
Comments are closed.