ಬೆಂಗಳೂರು: ದೇಶಾದ್ಯಂತ ರಾಕಿ ಭಾಯ್ ಹವಾ ಜೋರಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಇಂದು ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಎಲ್ಲಾ ಕಡೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ಬರೆಯಲಿದೆ ಕೆಜಿಎಫ್.
ಕನ್ನಡದ ಚಿತ್ರವೊಂದು ಈ ಪಾಟಿ ಸದ್ದು ಮಾಡುತ್ತಿರುವುದು ಇದೇ ಮೊದಲು. ಹಿಂದಿ ಅವತರಣಿಕೆ ಯ ಕೆಜಿಎಫ್ ಚಿತ್ರ ಸುಮಾರು 1500 ಸ್ಕ್ರೀನ್ ಗಳಲ್ಲಿ ತೆರೆ ಕಾಣುತ್ತಿದೆ. ಇನ್ನು ಕನ್ನಡದಲ್ಲಿ 400, ತೆಲುಗು 400, ತಮಿಳು 100 ಮಲಯಾಳಂ 60 ಒಟ್ಟು 2460 ಚಿತ್ರಮಂದಿರಗಳಲ್ಲಿ ರಿಲೀಸಾಗಿದೆ.
ಮೊದಲ ದಿನ ಕಲೆಕ್ಷನ್ ನಲ್ಲೂ ಕೆಜಿಎಫ್ ದಾಖಲೆ ಬರೆಯಲಿದೆ. ವರದಿಗಳ ಪ್ರಕಾರ ಹಿಂದಿ ಆವೃತ್ತಿಯ ಚಿತ್ರ ಮೊದಲ ದಿನ 3-4 ಕೋಟಿ ಗಳಿಕೆ ಕಾಣಬಹುದು ಎನ್ನಲಾಗಿದೆ. ಇನ್ನು ಕನ್ನಡದಲ್ಲಿ 20-30 ಕೋಟಿ ಗಳಿಕೆ ಆಗಬಹುದು ಎಂಬ ಲೆಕ್ಕಾಚಾರ ಮಾಡಲಾಗಿದೆ.
ಇಂದೆ ಬಾಲಿವುಡ್ ನಟ ಶಾರುಕ್ ಖಾನ್ ಅಭಿನಯದ ಜೀರೋ ಚಿತ್ರ ಸಹ ಬಿಡುಗಡೆಯಾಗಿದ್ದು ಕೆಜಿಎಫ್ ಮುಂದೆ ಇದು ಸಪ್ಪೆ ಆಗಿರುವುದರಿಂದ ಕೆಜಿಎಫ್ ಗೆ ವರದಾನವಾಗಲಿದೆ.
#KGF screen count…
Hindi: 1500
Kannada: 400
Telugu: 400
Tamil: 100
Malayalam: 60
Total: 2460 screens
— taran adarsh (@taran_adarsh) December 21, 2018
Comments are closed.