ಬೆಂಗಳೂರು: ಬಿಗ್ ಬಾಸ್ ಮನೆಗೆ ಸ್ಪರ್ಧಿ ಆ್ಯಂಡಿ ಅವರ ತಂದೆ ಎಂಟ್ರಿ ಕೊಟ್ಟು ಮಗನನ್ನು ತನ್ನ ಜೊತೆಗೆ ಕರೆದುಕೊಂಡು ಹೋಗುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.
ಬಿಗ್ ಬಾಸ್ ಸ್ಪರ್ಧಿಗಳಿಗೆ ರಿಮೋಟ್ ಕಂಟ್ರೋಲ್ ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್ ನಲ್ಲಿ ಬಿಗ್ ಬಾಸ್ `ಪಾಸ್’ ಎಂದು ಹೇಳಿದಾಗ ಸ್ಪರ್ಧಿಗಳು ಯಾರೇ ಬಂದರೂ ಮಾತನಾಡದೇ, ಅಲುಗಾಡದೇ ಸುಮ್ಮನೆ ನಿಲ್ಲಬೇಕಾಗುತ್ತದೆ. ಈ ವೇಳೆ ಸ್ಪರ್ಧಿಗಳ ಮನೆಯವರು ಬಿಗ್ ಬಾಸ್ ಮನೆಗೆ ಆಗಮಿಸುತ್ತಾರೆ.
ಆ್ಯಂಡಿ ಅವರನ್ನು ಭೇಟಿ ಮಾಡಲು ಅವರ ತಂದೆ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಬಂದ ತಕ್ಷಣ ಲಿವಿಂಗ್ ಏರಿಯಾದಲ್ಲಿ ಕುಳಿತ್ತಿದ್ದ ಆ್ಯಂಡಿ ಅವರ ಕೈ ಹಿಡಿದುಕೊಂಡು ಒಂದು ನಿಮಿಷ ಬಾ ಎಂದು ಹೇಳಿ ಉಳಿದ ಸ್ಪರ್ಧಿಗಳ ಬಳಿ ಕ್ಷಮೆ ಕೋರಿದ್ದಾರೆ.
ಈ ವೇಳೆ ಧನರಾಜ್ ಅವರು ಅಂಕಲ್ ನೀವು ಅಂದುಕೊಂಡಂತೆ ಏನಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ನಿಮಗೆಲ್ಲ ಇವನು ಎಷ್ಟು ತೊಂದರೆ ಮಾಡಿದ್ದಾನೆ. ನಾನು ಯಾಕೆ ಈತನನ್ನು ಇಲ್ಲಿ ಬಿಡಬೇಕು ಎಂದು ಹೇಳಿದ್ದಾರೆ.
ಬಳಿಕ ಕ್ಯಾಮೆರಾ ಮುಂದೆ ಹೋದ ಆ್ಯಂಡಿ ತಂದೆ, ಬಿಗ್ ಬಾಸ್ ನಾನು ಮಗನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ. ಆಗ ಆ್ಯಂಡಿ “ಡ್ಯಾಡಿ ನಾನು ಕಷ್ಟಪಟ್ಟು ಆಡಿದ್ದೇನೆ” ಎಂದು ಹೇಳಿದಾಗ ಅವರ ತಂದೆ ಕೋಪದಿಂದ ಇಲ್ಲ. ನೀನು ಎಲ್ಲರ ಬಳಿ ಪ್ರೀತಿಯನ್ನು ಸಂಪಾದಿಸಬೇಕು ಎಂದು ಹೇಳಿ ಆ್ಯಂಡಿ ಕೈ ಹಿಡಿದುಕೊಂಡು ಮನೆಯ ಮುಖ್ಯದ್ವಾರದ ಬಳಿ ಕರೆದುಕೊಂಡು ಹೋಗಿದ್ದಾರೆ.
ಆ್ಯಂಡಿ ಅವರ ತಂದೆಯ ವರ್ತನೆ ನೋಡಿ ಮನೆಯವರು ಆಶ್ಚರ್ಯಗೊಂಡಿದ್ದಾರೆ. ಅಲ್ಲದೇ ಆ್ಯಂಡಿ ಅವರನ್ನು ಲಿವಿಂಗ್ ಏರಿಯಾದಿಂದ ಕರೆದುಕೊಂಡು ಹೋಗುವಾಗ ಸ್ಪರ್ಧಿಗಳು ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ.
ಇದು ಕೇವಲ ಪ್ರೋಮೋ ಆಗಿದ್ದು, ಆ್ಯಂಡಿ ನಿಜವಾಗಲೂ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತಾರಾ, ಇಲ್ಲವಾ ಎಂಬುದು ಇಂದಿನ(ಗುರುವಾರ) ಸಂಚಿಕೆಯಲ್ಲಿ ಗೊತ್ತಾಗಲಿದೆ.
Comments are closed.