ಮುಂಬೈ: ಜಿಮ್ಮಿ ಫಲಾನ್ ಅವರ ಪ್ರತಿಷ್ಠಿತ ದಿ ಟು ನೈಟ್ ಶೋದಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಚೋಪ್ರಾ ಟ್ರೋಲ್‌ಗೆ ಗುರಿಯಾಗಿದ್ದಾರೆ. ಅವರು ಧರಿಸಿದ್ದ ಡ್ರೆಸ್ ಬಗ್ಗೆ ಸಾಕಷ್ಟು ಕಮೆಂಟ್ ಬರುತ್ತಿದೆ. ಪ್ರಿಯಾಂಕಾ ಛೋಪ್ರಾ ಮತ್ತು ನಿಕ್ ಜೋನಾಸ್ ಖಾಸಗಿ ಕ್ಷಣಗಳನ್ನು ಕಳೆಯುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಸಂದರ್ಶನದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಪತಿ ನಿಕ್ ಜೋನಾಸ್ ಬಗ್ಗೆ, ಭಾರತೀಯ ಸಂಪ್ರದಾಯದ ಬಗ್ಗೆಯೂ ಮಾತನಾಡಿದ್ದಾರೆ. ಆದರೆ ಅಷ್ಟೇ ಬೋಲ್ಡಾದ ಡ್ರೆಸ್ ಧರಿಸಿ ಬಂದಿದ್ದಕ್ಕೆ ಟ್ರೋಲಿಗರು ಕಾಲೆಳೆದಿದ್ದಾರೆ.
Comments are closed.