ರಿಷಬ್ ಶೆಟ್ಟಿ ನಿರ್ದೇಶನದ ‘ಬೆಲ್ ಬಾಟಂ’ ಚಿತ್ರ ಮುಂದಿನ ವಾರ ತೆರೆಗೆ ಬರುತ್ತಿದೆ. ಈಗಾಗಲೇ ಸಾಕಷ್ಟು ವಿಚಾರಗಳಿಂದ ನಿರೀಕ್ಷೆ ಹುಟ್ಟುಹಾಕಿರುವ ಈ ಸಿನಿಮಾ ಈಗ ಆಡಿಯೋ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದೆ.
ಈಗಾಗಲೇ ಟ್ರೈಲರ್ ಮೂಲಕ ‘ಬೆಲ್ ಬಾಟಂ’ ಬಗ್ಗೆ ಒಂದಷ್ಟು ವಿಚಾರಗಳನ್ನು ಹೇಳಿದ್ದ ಸಿನಿಮಾ ತಂಡ, ಆಡಿಯೋ ಟ್ರೈಲರ್ನಲ್ಲಿ ಇನ್ನೂ ಕೆಲ ವಿಚಾರಗಳನ್ನು ಹರಿಬಿಟ್ಟಿದೆ. ಆಡಿಯೋ ಟ್ರೈಲರ್ನಲ್ಲಿ ಬರುವ ಒಂದಷ್ಟು ಡೈಲಾಗ್ಗಳು ತುಂಬಾನೇ ಆಕರ್ಷಿತವಾಗಿದ್ದು, ಪ್ರೇಕ್ಷಕರಿಂದ ಅಂಕ ಗಿಟ್ಟಿಸಿಕೊಳ್ಳುತ್ತದೆ.
‘ಹಾಲಿನ ಪಾತ್ರೆಯನ್ನು ನಾವು ಸರಿಯಾಗಿ ಮುಚ್ಚದೇ ಬೆಕ್ಕನ್ನು ಕಳ್ಳ ಎಂದು ದೂರುವುದು ತಪ್ಪು’ ಎಂಬಿತ್ಯಾದಿ ಸಂಭಷಾಣೆಗಳು ಈ ಆಡಿಯೋ ಟ್ರೈಲರ್ನ ಹೈಲೈಟ್. ಒಟ್ಟಿನಲ್ಲಿ ಇದು ಕನ್ನಡದ ಪಾಲಿಗೆ ಭಿನ್ನ ಪ್ರಯತ್ನ ಎಂದೇ ಹೇಳಬಹುದು.
‘ಬೆಲ್ ಬಾಟಂ’ ಚಿತ್ರ ಜ.15ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ರಿಷಬ್ ನಾಯಕನಾಗಿ ಕಾಣಿಸಿಕೊಂಡರೆ ಅವರಿಗೆ ಜೊತೆಯಾಗಿ ಹರಿಪ್ರಿಯಾ ಬಣ್ಣ ಹಚ್ಚಿದ್ದಾರೆ. ಜಯತೀರ್ಥ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರ ಫೆ.15ರಂದು ತೆರೆಗೆ ಬರುತ್ತಿದೆ.
Comments are closed.